ಹಾವೇರಿ: ಹಾವೇರಿ ನಗರದ ಬಸ್ ನಿಲ್ದಾಣದ ಮುಂದೆ ಪೌರತ್ವ ಕಾಯ್ದೆಯನ್ನು ಬೆಂಬಲಿಸಿ ಸಾರ್ವಜನಿಕರ ಸಹಿ ಸಂಗ್ರಹ ಅಭಿಯಾನಕ್ಕೆ ಸಹಿ ಮಾಡುವ ಮೂಲಕ ಶಾಸಕ ನೆಹರು ಓಲೇಕಾರ ಅಭಿಯಾನಕ್ಕೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ನೆಹರು ಓಲೇಕಾರ, ಪೌರತ್ವ ಕಾಯ್ದೆ ಭಾರತೀಯ ಅಲ್ಪಸಂಖ್ಯಾತ ಸಮುದಾಯಕ್ಕೆ ಪೂರಕವಾಗಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಪೌರತ್ವ ಕಾಯ್ದೆಯನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವದು ದುರದೃಷ್ಟಕರ ಸಂಗತಿಯಾಗಿದೆ ಎಂದರು.ಈ ಸಂದರ್ಭದಲ್ಲಿ ನಗರಾಭಿದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶಿವಕುಮಾರ್ ಸಂಗೂರ, ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷರಾದ ನಜೀರ್ ಹುಸೇನ್ ನದಾಫ, ಬಾಬುಸಾಬ್ ಮೋಮಿನಗಾರ, ಮುಖಂಡರಾದ ಜಗದೀಶ್ ಮಲಗೊಡ, ಗಿರೀಶ್ ತುಪ್ಪದ, ಮಂಜುನಾಥ್ ಇಟಗಿ, ನಂಜುಂಡೇಶ್ವರ್ ಕಳ್ಳೆರ, ಅಶೋಕ್ ಬಣಕಾರ, ಶ್ರೀಕಾಂತ್ ಪೂಜಾರ, ಎನ್ ಪಿ ಚಾವಡಿ, ಶಿವರಾಜ್ ಮತ್ತಿಹಳ್ಳಿ, ನಾಗರಾಜ್ ಹಿರೇಮಠ, ಹಾಗೂ ಪ್ರಮುಖರು ಉಪಸ್ಥಿತರಿದ್ದರು.Sign in to your account
Username or Email Address


Password

 Remember Me


