ಬೆಂಗಳೂರು: ಸಿಎಎ ಹಾಗೂ ಎನ್ ಆರ್ ಸಿ ಸಂಬಂಧ ಪ್ರತಿಭಟನಾ ಸಮಾವೇಶದಲ್ಲಿ ಮುಸ್ಲಿಂ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ಕೊಟ್ಟ ಶಾಸಕ ಸೋಮಶೇಖರ್ ರೆಡ್ಡಿಗೆ ಮಾಜಿ ಸಚಿವ ಜಮೀರ್ ಅಹಮ್ಮದ್ ಎದೆ ತಟ್ಟಿ ಪಂಥಾಹ್ವಾನ ಕೊಟ್ಟಿದ್ದಾರೆ.ಬೆಂಗಳೂರಿನಲ್ಲಿ ಮಾತನಾಡಿದ ಜಮೀರ್ ಅಹಮ್ಮದ್ ಇವತ್ತು ಸೋಮವಾರ ಮುಂದಿನ ಸೋಮವಾರದ ಒಳಗೆ ಸೋಮಶೇಖರ್ ರೆಡ್ಡಿಯನ್ನ ಬಂಧಿಸಬೇಕು. ಅವರ ಶಾಸಕ ಸ್ಥಾನವನ್ನ ವಜಾಗೊಳಿಸಬೇಕು. ಇಲ್ಲಾ ಅಂದರೆ ಮುಂದಿನ ಸೋಮವಾರ ನಾನೇ ಬಳ್ಳಾರಿಗೆ ಹೋಗಿ ಸೋಮಶೇಖರ್ ರೆಡ್ಡಿ ಮನೆ ಮುಂದೆ ಧರಣಿ ಕೂರುತ್ತೇನೆ ಎಂದು ಏಕವಚನದಲ್ಲಿಯೇ ಆಕ್ರೋಶ ವ್ಯಕ್ತಪಡಿಸಿದರು.ನಾನು ಬಳ್ಳಾರಿಗೆ ಬರುತ್ತೇನೆ ತಾಕತ್ತಿದ್ದರೆ ಏನು ಮಾಡ್ತಿಯೋ ಮಾಡ್ಕೋ. ನೀನು ಖಡ್ಗ ತರ್ತಿಯೋ ಏನು ತರ್ತಿಯೋ ತಗೊಂಡು ಬಾ. ನಾವೇನು ಕೈಗೆ ಬಳೆ ತೊಟ್ಟುಕೊಂಡು ಕೂತಿಲ್ಲ. ನೀನು ಉಫ್ ಅನ್ನೋದಾದರೆ ಮೊದಲು ನನಗೆ ಅನ್ನು. ನೀನು ಖಡ್ಗ ಬೀಸೋದಾದರೆ ನನಗೆ ಮೊದಲು ಬೀಸು ಆಮೇಲೆ ಸಮುದಾಯದ ವಿಷಯಕ್ಕೆ ಬಾ.. ಮಿಸ್ಟರ್ ಸೋಮಶೇಖರ್ ರೆಡ್ಡಿ I Am Coming ಎಂದು ಸವಾಲೆಸೆದರು. ಶಾಸಕ ಸೋಮಶೇಖರ್ ರೆಡ್ಡಿ ವಿರುದ್ಧ ಹಿಗ್ಗಾಮುಗ್ಗ ವಾಗ್ದಾಳಿ ಮಾಡಿದ್ದಾರೆ.ಸೋಮಶೇಖರ್ ರೆಡ್ಡಿಗೆ ಮಾನ ಮರ್ಯಾದೆ ಇಲ್ಲಾ. 2013 ರಲ್ಲಿ ಹೇಡಿ ತರ ಹೆದರಿ ಚುನಾವಣೆಗೆ ನಿಂತಿಲ್ಲ ಅವನು ಜಮೀರ್ ಅಹ್ಮದ್ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.Sign in to your account
Username or Email Address


Password

 Remember Me


