ಬೆಂಗಳೂರು: ಸಿಎಎ ಸಂಬಂಧ ಪ್ರತಿಭಟನೆಯಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ವಾಗ್ದಾಳಿ ನಡೆಸಿದ್ದ ಶಾಸಕ ಸೋಮಶೇಖರ್ ರೆಡ್ಡಿ ಈಗ ಯು ಟರ್ನ್ ಹೊಡೆದಿದ್ದಾರೆ. ಬಳ್ಳಾರಿಯಲ್ಲಿ ಶ್ರೀರಾಮುಲು ಸಮ್ಮುಖದಲ್ಲಿ ಮುಸ್ಲಿಂ ಮುಖಂಡರ ಜೊತೆ ಮಾತುಕತೆ ನಡೆಸಿದ ವಿಡಿಯೋ ಈಗ ವೈರಲ್ ಆಗಿದೆ.ಬಳ್ಳಾರಿಯಲ್ಲಿ ಮುಸ್ಲಿಂ ಸಮುದಾಯದ ಕಾರ್ಯಕ್ರಮವೊಂದರಲ್ಲಿ ಮುಖಂಡರು ಹಾಗೂ ಸೋಮಶೇಖರ್ ರೆಡ್ಡಿ ನಡುವೆ ಶ್ರೀರಾಮುಲು ಸಂಧಾನ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಇದನ್ನೂ ಓದಿ: ಸೋಮಶೇಖರ್ ಪ್ರಚೋದನಾಕಾರಿ ಹೇಳಿಕೆ ತಪ್ಪು: ಡಿಸಿಎಂ ಅಶ್ವಥ್ ನಾರಾಯಣ್ಶ್ರೀರಾಮುಲು ಸಿಎಎ ವಿರುದ್ಧ ಪ್ರತಿಭಟನೆ ಮಾಡುತ್ತಿರುವವರು ನಿಮ್ಮನ್ನು ದಾರಿ ತಪ್ಪಿಸುತ್ತಿದ್ದಾರೆ, ಆತಂಕ ಬೇಡ. ದೇಶದಲ್ಲಿರುವರಿಗೆ ಯಾವುದೇ ದಾಖಲೆ ಕೇಳಲ್ಲ. ಅಕ್ರಮವಾಗಿ ಬಂದವರಿಗೆ ಮಾತ್ರ ದಾಖಲೆ ಕೇಳುತ್ತಾರೆ. ನೀವು ಹಿರಿಯರು, ಇದನ್ನು ಮನವರಿಕೆ ಮಾಡಬೇಕು ಎಂದು ಮುಸ್ಲಿಂ ಧರ್ಮಗುರುವೊಬ್ಬರೊಂದಿಗೆ ಮಾತಾಡಿದ್ದಾರೆ. ಇದನ್ನೂ ಓದಿ: ಸೋಮಶೇಖರ್ ರೆಡ್ಡಿ ಶಾಸಕತ್ವ ಸ್ಥಾನ ಅಮಾನತ್ತಿಗೆ ಆಗ್ರಹಿಸಿ ರಾಯಚೂರಿನಲ್ಲಿ ಹೋರಾಟಅದಕ್ಕೆ ಮುಸ್ಲಿಂ ಧರ್ಮಗುರು ಜನರ ಮನಸ್ಸು ಕಲುಷಿತವಾಗುವಂತೆ ಬಿಂಬಿತವಾಗಿದೆ. ನಿಮ್ಮ ಶರೀರ ರೋಗಗ್ರಸ್ತವಾಗಿಲ್ಲ. ನಿಮ್ಮ ಮನಸ್ಸುಗಳು ರೋಗಗ್ರಸ್ಥವಾಗಿದೆ ಎಂದು ಸೋಮಶೇಖರ್ ರೆಡ್ಡಿ ವಿರುದ್ದ ಅಸಮಾಧಾನ ಹೊರ ಹಾಕಿದ್ದಾರೆ. ಇದನ್ನೂ ಓದಿ:  ಸಿಎಎ ವಿರೋಧಿ ಹೋರಾಟಗಾರರ ವಿರುದ್ಧ ವಿವಾದಾತ್ಮಕ ಹೇಳಿಕೆ- ರಾಯಚೂರಿನಲ್ಲಿ ಸೋಮಶೇಖರ್ ರೆಡ್ಡಿ ವಿರುದ್ಧ ದೂರುಶಾಸಕ ಸೋಮಶೇಖರ್ ರೆಡ್ಡಿ ನಾವು 130 ಕೋಟಿ ಜನರನ್ನೂ ಭಾರತೀಯರು ಎಂದು ಹೇಳುತ್ತೇವೆ. ಹಿಂದೂಗಳು ಬೇರೆ, ಮುಸ್ಲಿಮರು ಬೇರೆ ಎಂದಿಲ್ಲ ಎಂದು ಸಮಜಾಯಿಶಿ ನೀಡಿದ್ದಾರೆ. ಜನರಲ್ಲಿ ಪ್ರತಿದಿನ ಗೊಂದಲ ಮೂಡಿಸುತ್ತಿದ್ದಾರೆ. ಪ್ರಧಾನಿ ಮೋದಿ, ಅಮಿತ್ ಶಾ ಒಳ್ಳೆಯ ಆಡಳಿತ ನಡೆಸುವುದನ್ನು ಸಹಿಸಲಾರದವರು ಮಾಡುತ್ತಿರುವ ಅಪಪ್ರಚಾರ. ಒಂದೆರಡು ದಿನ ಈ ವಿಚಾರದಲ್ಲಿ ಮೌನವಾದರೆ ಎಲ್ಲವೂ ಸರಿಹೋಗುತ್ತೆ ಎಂದು ರಾಮುಲು ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡಿದ್ದಾರೆ. ಮುಸ್ಲಿಂ ಧರ್ಮಗುರು ಈಗ ನಿಮಗಾಗಿರುವುದು ದೇಹಕ್ಕೆ ಆಗಿರುವ ರೋಗವಲ್ಲ. ನಿಮ್ಮ ಮನಸ್ಸಿಗೆ ಅಂಟಿರುವ ರೋಗ ಎಂದಿದ್ದಾರೆ. ಶ್ರೀರಾಮುಲು, ಸೋಮಶೇಖರ ರೆಡ್ಡಿ ಇಬ್ಬರು ಗುರುಗಳೇ ನೀವು ಸತ್ಯವನ್ನು ಜನರಿಗೆ ಹೇಳಿ ಎಂದು ಕೇಳಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ.Sign in to your account
Username or Email Address


Password

 Remember Me


