ಸ್ಯಾಂಡಲ್‍ವುಡ್ ನಲ್ಲಿ ಸಖತ್ ಕ್ರೇಜ್ ಹುಟ್ಟಿಸಿರೋ ಸಿನಿಮಾ ಸಲಗ. ದುನಿಯಾ ವಿಜಿ ನಿರ್ದೇಶಿಸಿ ನಟಿಸುತ್ತಿರುವ ಈ ಚಿತ್ರದ ಫಸ್ಟ್ ಲಿರಿಕಲ್ ಸಾಂಗ್ ರಿಲೀಸ್ ಆಗಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಾಂಗ್ ರಿಲೀಸ್ ಮಾಡಿದ್ದಾರೆ. ಸದ್ಯ ‘ಸೂರಿ ಅಣ್ಣ’ ಹಾಡು ಸೆನ್ಸೇಷನಲ್ ಕ್ರಿಯೇಟ್ ಮಾಡಿದ್ದು ಸಖತ್ ಕಿಕ್ ಕೊಡುತ್ತಿದೆ. ಟಗರು ಚಿತ್ರದ ಟೈಟಲ್ ಟ್ರ್ಯಾಕ್ ಹಾಡಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ಆಂಟೋನಿ ದಾಸ್ ‘ಸೂರಿ ಅಣ್ಣ’ ಸಾಂಗ್ ಗೆ ಧ್ವನಿಯಾಗಿ ಮತ್ತೆ ಸ್ಯಾಂಡಲ್‍ವುಡ್ ನಲ್ಲಿ ಮನೆ ಮಾತಾಗಿದ್ದಾರೆ.ಟಗರು ಖ್ಯಾತಿಯ ಚರಣ್ ರಾಜ್ ಮಾಸ್ ಮ್ಯೂಸಿಕ್ ಮತ್ತೆ ಮ್ಯಾಜಿಕ್ ಕ್ರಿಯೇಟ್. ಅಲ್ಲದೇ ಚರಣ್ ರಾಜ್ ಹಾಗೂ ಆಂಟೋನಿ ದಾಸ್ ಕಾಂಬಿನೇಷನ್ ಮತ್ತೊಂದು ಹಿಟ್ ಸಾಂಗ್ ನೀಡುವಲ್ಲಿ ಯಶಸ್ವಿಯಾಗಿದೆ.Here is the first lyrical video from #salaga #surianna @kp_sreekanth @OfficialViji @charanrajmr2701 https://t.co/caLW9wIYHC pic.twitter.com/nh4MqWCvAt— Gurudev Hoysala (@Dhananjayaka) January 6, 2020‘ಸಲಗ’ ಮೂಲಕ ನಿರ್ದೇಶಕನಾಗಿ ಬಡ್ತಿ ಹೊಂದಿರುವ ಬ್ಲ್ಯಾಕ್ ಕೋಬ್ರಾ ಮೇಕಿಂಗ್ ನಲ್ಲಿ ತಮ್ಮ ನಿರ್ದೇಶನದ ಝಲಕ್ ತೋರಿಸಿದ್ರು. ಈಗ ಚಿತ್ರದ ಹಾಡು ಕೂಡ ಹಿಟ್ ಆಗಿದ್ದು ಮೊದಲ ನಿರ್ದೇಶನದಲ್ಲೆ ಜಯಭೇರಿ ಬಾರಿಸೋ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ. ಒಟ್ನಲ್ಲಿ ಚಿತ್ರಕ್ಕೆ ಹುಟ್ಟಿರೋ ಕ್ರೇಜ್ ನೋಡಿ ವಿಜಿ ಅಭಿಮಾನಿಗಳು ಹಾಗೂ ಚಿತ್ರತಂಡ ಸಖತ್ ಥ್ರಿಲ್ ಆಗಿದ್ದಾರೆ.ಟಗರು ಖ್ಯಾತಿಯ ಕೆ.ಪಿ.ಶ್ರೀಕಾಂತ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಸಂಜನಾ ಆನಂದ್ ನಾಯಕಿಯಾಗಿ ವಿಜಿ ಜೊತೆ ಸ್ಕೀನ್ ಶೇರ್ ಮಾಡಿದ್ದಾರೆ. ಫಸ್ಟ್ ಲುಕ್, ಮೇಕಿಂಗ್ ಮತ್ತು ಹಾಡುಗಳು ಮೂಲಕ ಬಝ್ ಕ್ರಿಯೇಟ್ ಮಾಡಿರೋ ಸಲಗ ಸದ್ಯದಲ್ಲೆ ಟೀಸರ್, ಟ್ರೇಲರ್ ಮೂಲಕ ಮಾಸ್ ಪ್ರಿಯರ ಮನತಣಿಸಲಿದೆ.Sign in to your account
Username or Email Address


Password

 Remember Me


