ಮಂಡ್ಯ: ಶಾಲೆಯ ವಾರ್ಷಿಕೋತ್ಸವದ ಪ್ರಯುಕ್ತ ಮಂಡ್ಯ ಜಿಲ್ಲೆಯ ಪಾಂಡವಪುರದ ಬಿಜಿಎಸ್ ಶಾಲೆಯಲ್ಲಿ ಇಂದು ಮಕ್ಕಳ ಪೋಷಕರಿಗೆ ಕ್ರೀಡಾಕೂಟ ನಡೆಸಲಾಯಿತು.ವಾರ್ಷಿಕೋತ್ಸವ ಪ್ರಯುಕ್ತ ಮಕ್ಕಳಿಗೆ ಕ್ರೀಡಾಕೂಟ ನಡೆಸುವುದು ಸಾಮಾನ್ಯ. ಹೀಗಾಗಿ ಪೋಷಕರಿಗಾಗಿ ಕ್ರೀಡಾಕೂಟ ನಡೆಸಲಾಯಿತು. ಶಾಲೆಯ ಕ್ರೀಡಾಂಗಣದಲ್ಲಿ ನಡೆದ ಪೋಷಕರ ಕ್ರೀಡಾಕೂಟದಲ್ಲಿ ಪೋಷಕರು ಎಲ್ಲಾ ಟೆನ್ಷನ್ ಮರೆತು ಫುಲ್ ಎಂಜಾಯ್ ಮಾಡಿದರು. ತಂದೆ-ತಾಯಿಗಳ ಕ್ರೀಡಾಕೂಟ ವೀಕ್ಷಣೆ ಮಾಡಿದ ಮಕ್ಕಳು ಚಪ್ಪಾಳೆ ತಟ್ಟಿಕೊಂಡು ತಮ್ಮ ತಂದೆ-ತಾಯಿಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಸಖತ್ ಖುಷಿಪಟ್ಟರು.ಈ ಕ್ರೀಡಾಕೂಟದಲ್ಲಿ ಮ್ಯೂಸಿಕಲ್ ಚೇರ್, ಕಾಂಗರೂ ರೇಸ್, ಬಕೆಟ್ ಇನ್ ದ ಬಾಲ್, ರಂಗೋಲಿ ಸ್ಪರ್ಧೆ, ಬೆಂಕಿ ಇಲ್ಲದೇ ಅಡುಗೆ ತಯಾರಿ ಮಾಡುವುದು ಸೇರಿದಂತೆ ಇತರೆ ಕ್ರೀಡೆಗಳನ್ನು ಆಡಿಸಲಾಯಿತು.Sign in to your account
Username or Email Address


Password

 Remember Me


