ಬೆಂಗಳೂರು: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ 10 ಕಾರ್ಮಿಕ ಸಂಘಟನೆಗಳು ಬುಧವಾರ ದೇಶವ್ಯಾಪಿ ಬಂದ್‍ಗೆ ಕರೆ ನೀಡಿವೆ.ನಮ್ಮ ಬೇಡಿಕೆ ಮತ್ತು ಸಾಮಾಜಿಕ ಭದ್ರತೆಯ ಬಗ್ಗೆ ಪದೇ ಪದೇ ಸಂಘಟನೆಗಳು ದನಿ ಎತ್ತಿದ್ದರೂ, ಸರ್ಕಾರ ಸಮಸ್ಯೆ ಪರಿಹರಿಸಲು ಮುಂದಾಗಿಲ್ಲ ಎಂದು ಆರೋಪಿಸಿ ಎಐಟಿಯುಸಿ, ಎಚ್‍ಎಂಎಸ್, ಸಿಐಟಿಯು, ಎಐಯುಟಿಯುಸಿ, ಎಸ್‍ಇಡಬ್ಲ್ಯುಎ, ಎಐಸಿಸಿಟಿಯು, ಎಲ್‍ಪಿಎಫ್ ಮತ್ತು ಯುಟಿಯುಸಿ ಸಂಘಟನೆಗಳು ಪ್ರತಿಭಟನೆ ನಡೆಸಲಿವೆ.ಪ್ರತಿಭಟನೆಗೆ ಕಾರಣ ಏನು?
1. ಒಟ್ಟು ರಾಷ್ಟ್ರೀಯ ಉತ್ಪನ್ನ ಜಿಡಿಪಿ ಶೇ.9.4 ರಿಂದ 4.5ಕ್ಕೆ ಕುಸಿತ.
2. ಆರ್ಥಿಕ ಬಿಕ್ಕಟ್ಟಿನಿಂದ ಉದ್ಯೋಗ ಕಳೆದುಕೊಂಡವರ ಸಂಖ್ಯೆ 50 ಲಕ್ಷ ಮಂದಿ.
3. ಎಂಜಿನಿಯರಿಂಗ್ ಮುಗಿಸಿದ 100 ಮಂದಿಯಲ್ಲಿ 12 ಜನರಿಗೆ ಮಾತ್ರ ಉದ್ಯೋಗ.
4. ಮಾಲೀಕರ ಲಾಭದ ಪಾಲು 100ರಲ್ಲಿ 45 ರೂ. ಕಾರ್ಮಿಕರ ವೇತದ ಪಾಲು 100 ರಲ್ಲಿ 15 ರೂ.
5. ಜಿಎಸ್‍ಟಿಯಿಂದ ಎಲ್ಲ ಬೆಲೆಗಳು ಶೇ.20 ರಷ್ಟು ಏರಿಕೆ.
6. ಕಾರ್ಮಿಕರು ಪ್ರತಿಭಟನೆ ಮಾಡಿದರೆ 6 ತಿಂಗಳು ಜೈಲು ಶಿಕ್ಷೆ.
7. ಶ್ರೀಮಂತ ಉದ್ಯಮಿಗಳು ಮಾಡಿರುವ ಬ್ಯಾಂಕ್ ಸಾಲ ಮರುಪಾವತಿ ಮಾಡದೇ ಇರಲು ಕಾನೂನು ತರಲಾಗಿದೆ.ಬೇಡಿಕೆ ಏನು?
1. 21 ಸಾವಿರ ರೂಪಾಯಿ ರಾಷ್ಟ್ರವ್ಯಾಪಿ ಸಮಾನ ಕನಿಷ್ಟ ವೇತನಕ್ಕೆ ಆಗ್ರಹ.
2. ಕೇಂದ್ರ ಸರ್ಕಾರ ದ ಖಾಸಗೀಕರಣ ನೀತಿಗೆ ವಿರೋಧ.
3. ಕಾರ್ಮಿಕ ಕಾನೂನು ಕಟ್ಟುನಿಟ್ಟಿನ ಜಾರಿಗಾಗಿ ಜಿಲ್ಲೆಗಳಲಿ ಕಾರ್ಮಿಕ ನ್ಯಾಯಾಲಯ ಸ್ಥಾಪನೆ.
4. ಮಾಸಿಕ ಪಿಂಚಣಿ 10 ಸಾವಿರ ರೂಪಾಯಿಗಾಗಿ ಬೇಡಿಕೆ.
5. ಬೆಲೆಯೇರಿಕೆ ನಿಯಂತ್ರಣಕ್ಕೆ ಆಗ್ರಹಿಸಿ, ಸಾರ್ವತ್ರಿಕಪಡಿತರ ವ್ಯವಸ್ಥೆಗಾಗಿ.
6. ಆರ್ಥಿಕ ಹಿಂಜರಿತಕ್ಕೆ ಕಾರಣವಾಗಿರುವ ನೀತಿಗಳ ವಿರುದ್ಧ ಉದ್ಯೋಗ ಕಳಕೊಂಡ ಕಾರ್ಮಿಕರಿಗೆ ಉದ್ಯೋಗ ಸೃಷ್ಟಿ ಮಾಡಬೇಕು.7. ಕಟ್ಟಡ ಕಾರ್ಮಿಕರು, ಆಟೋ ಚಾಲಕರು, ಬೀದಿಬದಿಯ ವ್ಯಾಪಾರಸ್ಥರು, ಮನೆ ಕೆಲಸಗಾರರು, ಅಸಂಘಟಿತ ಕಾರ್ಮಿಕರಿಗೆ ಭವಿಷ್ಯ ನಿಧಿ ಸ್ಥಾಪನೆ, ಕಲ್ಯಾಣ ಯೋಜನೆಗೆ ಅನುದಾನ ನೀಡಬೇಕು.
8. ರೈತರ ಬೆಳೆಗಳಿಗೆ ನ್ಯಾಯಯುತ ಬೆಲೆಗಳಿಗಾಗಿ ಡಾ| ಸ್ವಾಮಿನಾಥನ್ ವರದಿ ಜಾರಿಗಾಗಿ, ಸಾಲ ಮನ್ನಾಕ್ಕಾಗಿ, ರೈತರ ಆತ್ಮಹತ್ಯೆ ತಡೆಗಾಗಿ, ಗ್ರಾಮೀಣ ಉದ್ಯೋಗ ಖಾತ್ರಿ ಬಲಪಡಿಸಲು ಆಗ್ರಹ.
9. ಗುತ್ತಿಗೆ ಪದ್ಧತಿ ನಿಯಂತ್ರಣ, ಸಮಾನ ಕೆಲಸಕ್ಕೆ ಸಮಾನ ವೇತನ, ಉದ್ಯೋಗ ಖಾಯಂ ಖಾತ್ರಿಗೆ ಆಗ್ರಹ.
11. ರಕ್ಷಣಾ ವಲಯ, ರೈಲ್ವೇ ಇಲಾಖೆ, ಸಾರಿಗೆ ಇಲಾಖೆ ಸೇರಿದಂತೆ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ವಿರೋಧಿಸಿ ಬಂದ್.Sign in to your account
Username or Email Address


Password

 Remember Me


