ದಾವಣಗೆರೆ: ಸೈಕೋ ಪತಿಯೊಬ್ಬ ಪ್ರೀತಿಸಿ ಮದುವೆಯಾದ ಪತ್ನಿಗೆ ಚಿತ್ರಹಿಂಸೆ ನೀಡಿರುವ ಘಟನೆ ಜಿಲ್ಲೆಯ ಜಗಳೂರು ಪಟ್ಟಣದ ಭರಮಸಮುದ್ರ ನಡೆದಿದೆ.ಪ್ರಿಯಾ ಕಿರುಕುಳಕ್ಕೆ ಒಳಗಾದ ವಿವಾಹಿತೆ. ಪ್ರಿಯಾ ಎರಡು ವರ್ಷಗಳ ಹಿಂದೆ ದಾವಣಗೆರೆಯ ಜಿಲ್ಲಾಸ್ಪತ್ರೆಯಲ್ಲಿ ತರಬೇತಿ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಳು. ಅದೇ ಗ್ರಾಮದ ಕಲ್ಲೇಶ್ ಫೇಸ್‍ಬುಕ್ ಮೂಲಕ ಪರಿಚಯವಾಗಿದ್ದನು. ಪರಿಚಯ ಪ್ರೀತಿಯಾಗಿ ನಂತರ ಇಬ್ಬರು ಮನೆಯವರಿಗೆ ತಿಳಿಸದೆ ದೇವಸ್ಥಾನವೊಂದರಲ್ಲಿ ಮದುವೆಯಾಗಿ, ರಿಜಿಸ್ಟರ್ ಮ್ಯಾರೇಜ್ ಕೂಡ ಆಗಿದ್ದರು.ಮದುವೆಯಾದ ನಂತರ ನನ್ನನ್ನು ನರ್ಸಿಂಗ್ ಮಾಡಲು ಹಾವೇರಿಗೆ ಕಲ್ಲೇಶ್ ಸೇರಿಸಿದ್ದನು. ಆದರೆ ನರ್ಸಿಂಗ್ ಮಾಡುವಾಗ ನಾನು ಬೇರೆ ಯುವಕನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದೇನೆ ಎಂದು ಅನುಮಾನಗೊಂಡು ಚಿತ್ರಹಿಂಸೆ ಕೊಟ್ಟಿದ್ದಾನೆ. ಅಲ್ಲದೇ ಮೇಣದ ಬತ್ತಿ, ಕರ್ಪೂರ, ಸ್ಕೂ ಡ್ರೈವರ್ ನಿಂದ ಹಲ್ಲೆ ನಡೆಸಿ, ಮೈಯಲ್ಲಾ ಸುಟ್ಟು ವಿಕೃತಿ ಮೆರೆದಿದ್ದಾನೆ. ನೀನು ಪತಿವ್ರತೆಯಾಗಿದ್ದರೆ ಕೈ ಮೇಲೆ ಕರ್ಪೂರ ಹಚ್ಚಿಕೋ, ಆಗ ಸುಟ್ಟರೆ ನೀನು ಪತಿವ್ರತೆಯಲ್ಲ, ಸುಡದೇ ಇದ್ದರೆ ಪತಿವ್ರತೆ ಎಂದು ಕೈ ಮೇಲೆ ಕರ್ಪೂರ ಹಚ್ಚಿ ವಿಕೃತ ಮೆರೆದಿದ್ದಾನೆ ಎಂದು ನೊಂದ ಪತ್ನಿ ಹೇಳಿದ್ದಾಳೆ.ಜೊತೆಗೆ ಪತ್ನಿಯ ಖಾಸಗಿ ವಿಡಿಯೋಗಳನ್ನು ರೆಕಾರ್ಡ್ ಮಾಡಿಕೊಂಡು, ಏನಾದರೂ ಮನೆಯವರಿಗೆ ಹಾಗೂ ಪೊಲೀಸರಿಗೆ ತಿಳಿಸಿದರೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದನು. ಕೊನೆಗೆ ಪ್ರಿಯಾ ಈ ಬಗ್ಗೆ ಪೋಷಕರಿಗೆ ತಿಳಿಸಿದ್ದಾಳೆ. ನಂತರ ಪೋಷಕರು ಮಗಳನ್ನು ಕರೆದುಕೊಂಡು ಬಂದು ಜಗಳೂರು ಠಾಣೆಯಲ್ಲಿ ದೂರು ನೀಡಿದ್ದಾರೆ.ಪೊಲೀಸರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ದೂರು ನೀಡಲು ಬಂದವರ ಮೇಲೆಯೇ ಪೊಲೀಸರು ದರ್ಪ ತೋರಿದ್ದು, ಆರೋಪಿಯನ್ನು ಬಂಧಿಸಲು ಸಹ ಮುಂದಾಗುತ್ತಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ.Sign in to your account
Username or Email Address


Password

 Remember Me


