ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್ ಚಾಪ್ಟರ್ 2’ ಸಿನಿಮಾಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಯಶ್ ಬರ್ತ್ ಡೇ ದಿನದಂದು ಚಿತ್ರದ ಟೀಸರ್ ರಿಲೀಸ್ ಮಾಡುವುದಾಗಿ ಚಿತ್ರತಂಡ ತಿಳಿಸಿತ್ತು. ಆದರೆ ಇದೀಗ ನಿರ್ದೇಶಕ ಪ್ರಶಾಂತ್ ನೀಲ್, ಯಶ್ ಹುಟ್ಟುಹಬ್ಬಕ್ಕೆ ‘ಕೆಜಿಎಫ್ 2’ ಚಿತ್ರದ ಟೀಸರ್ ಬಿಡುಗಡೆಯಾಗುತ್ತಿಲ್ಲ ಎಂದು ತಿಳಿಸಿದ್ದಾರೆ.ಜನವರಿ 8 ರಂದು ಯಶ್ ಹುಟ್ಟುಹಬ್ಬವಿದೆ. ಈ ಹಿನ್ನೆಲೆಯಲ್ಲಿ ಅಂದು ‘ಕೆಜಿಎಫ್ 2’ ಸಿನಿಮಾದ ಟೀಸರ್ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿತ್ತು. ಆದರೆ ಕಾರಣಾಂತರದಿಂದ ಜನವರಿ 8 ರಂದು ಟೀಸರ್ ಬಿಡುಗಡೆ ಮಾಡಲು ಸಾಧ್ಯವಿಲ್ಲ, ಹೀಗಾಗಿ ಕ್ಷಮಿಸಿ ಎಂದು ಪ್ರಶಾಂತ್ ನೀಲ್ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ.“ಯಶ್ ಅವರ ಹುಟ್ಟುಹಬ್ಬಕ್ಕೆ ‘ಕೆಜಿಎಫ್ 2’ ಸಿನಿಮಾದ ಟೀಸರ್ ಬಿಡುಗಡೆಯಾಗುತ್ತಿಲ್ಲ. ಯಾಕೆಂದರೆ ಇಂದಿನವರೆಗೂ ಸಿನಿಮಾ ಶೂಟಿಂಗ್ ನಡೆದಿದೆ. ನಾವೆಲ್ಲರೂ ಶೂಟಿಂಗ್ ಮುಗಿಸಿ ಜನವರಿ 7 ರಂದು ವಾಪಸ್ ಬರುತ್ತೇವೆ. ಈ ಸಿನಿಮಾದ ಬಗ್ಗೆ ನೀವೆಲ್ಲರೂ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದೀರಾ. ಹೀಗಾಗಿ ಸಿನಿಮಾ ಔಟ್ ಕಮ್ ಬಗ್ಗೆ ನಾವು ರಾಜಿ ಆಗುವುದಿಲ್ಲ. ನಿಮಗೆ ಅತ್ಯುತ್ತಮವಾದುದ್ದನ್ನು ನೀಡಲು ನಾವು ಮುಂದಾಗಿದ್ದೇವೆ. ದಯವಿಟ್ಟು ಕ್ಷಮಿಸಿ” ಎಂದು ನಿರ್ದೇಶಕ ಟ್ಟಿಟ್ಟರಿನಲ್ಲಿ ಬರೆದುಕೊಂಡಿದ್ದಾರೆ.ಅಷ್ಟೇ ಅಲ್ಲದೇ ಯಶ್ ಹುಟ್ಟುಹಬ್ಬದ ದಿನ ಟೀಸರ್ ಬದಲು ಸಿನಿಮಾದ ಎರಡನೇ ಪೋಸ್ಟರ್ ರಿಲೀಸ್ ಮಾಡುವುದಾಗಿ ತಿಳಿಸಿದ್ದಾರೆ. ಈ ಮೂಲಕ ಯಶ್ ಬರ್ತ್ ಡೇಗೆ ಟೀಸರ್ ನೋಡೋಣ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಸದ್ಯಕ್ಕೆ ಆಂಧ್ರಪ್ರದೇಶದಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಇತ್ತೀಚೆಗಷ್ಟೆ ನಟ ಯಶ್ ಕೂಡ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.Sign in to your account
Username or Email Address


Password

 Remember Me


