ಬೆಂಗಳೂರು: ಬಳ್ಳಾರಿಯಲ್ಲಿ ಶಾಸಕ ಸೋಮಶೇಖರ್ ರೆಡ್ಡಿ ನೀಡಿದ್ದ ಪ್ರಚೋದನಾಕಾರಿ ಹೇಳಿಕೆ ತಪ್ಪು ಎಂದು ಡಿಸಿಎಂ ಅಶ್ವಥ್ ನಾರಾಯಣ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಸೋಮಶೇಖರ್ ಮಾತನಾಡಿರೋದು ಸರಿಯಲ್ಲ. ಆ ರೀತಿ ಪ್ರಚೋದನಾತ್ಮಕವಾಗಿ ಸೋಮಶೇಖರ್ ಮಾತನಾಡಬಾರದಿತ್ತು. ನಾವೆಲ್ಲರೂ ಸಹೋದರರಾಗಿದ್ದು, ನಮಗೆ ಯಾರ ಮೇಲೂ ವೈರತ್ವ ಇಲ್ಲ. ವಸುದೈವ ಕುಟುಂಬ ಅನ್ನೊ ತತ್ವದಲ್ಲಿ ನಂಬಿಕೆ ಇಟ್ಟುಕೊಂಡಿದ್ದೇವೆ. ಈ ಬಗ್ಗೆ ಸೋಮಶೇಖರ್ ಜೊತೆ ಮಾತನಾಡುತ್ತೇನೆ ಎಂದು ಅಶ್ವಥ್ ನಾರಾಯಣ್ ತಿಳಿಸಿದರು.ಸೋಮಶೇಖರ್ ನೀಡಿದ ಹೇಳಿಕೆಯಿಂದಾಗಿ ಈಗಾಗಲೇ ಬಳ್ಳಾರಿಯಲ್ಲಿ ಎಫ್ ಐ ಆರ್ ದಾಖಲು ಮಾಡಲಾಗಿದೆ. ಅಲ್ಲದೇ ನಿನ್ನೆ ಕಾಂಗ್ರೆಸ್ ನಿಯೋಗ ಐಜಿಪಿಯವರನ್ನ ಭೇಟಿಯಾಗಿ ಸೋಮಶೇಖರ್ ವಿರುದ್ಧ ದೂರು ನೀಡಿತ್ತು. ರಾಜ್ಯದ ಹಲವು ಜಿಲ್ಲೆಗಳಲ್ಲಿ ಸೋಮಶೇಖರ್ ಹೇಳಿಕೆ ಖಂಡಿಸಿ ಪ್ರತಿಭಟನೆಗಳು ನಡೆಯುತ್ತಿವೆ.Sign in to your account
Username or Email Address


Password

 Remember Me


