ಬೆಂಗಳೂರು: ಪೌರತ್ವ ತಿದ್ದುಪಡಿ ನಿಷೇಧ ಕಾಯ್ದೆ ವಿರೋಧಿಸಿ ಪ್ರತಿಭಟನೆಗಳು ಹೆಚ್ಚಾಗುತ್ತಲೇ ಇವೆ. ಕೇಂದ್ರ ಸರ್ಕಾರದ ನೀತಿ ವಿರೋಧಿಸಿ ಟೌನ್ ಹಾಲ್ ಮುಂಭಾಗದಲ್ಲಿ ಇಂದು ವಿವಿಧ ಸಂಘಟನೆಗಳ ಕಾರ್ಯಕರ್ತರು ವಿನೂತನವಾಗಿ ಪ್ರತಿಭಟನೆ ನಡೆಸಿದರು.ಇಂದು ಸಂಜೆ 4 ಗಂಟೆಗೆ ಟೌನ್ ಹಾಲ್ ಮುಂದೆ ಸೇರಿದ ವಿವಿಧ ಸಂಘಟನೆಯ ಕಾರ್ಯಕರ್ತರು ತಮ್ಮ ಪ್ರತಿಭಟನೆಗೆ ಬುರ್ಖಾ ಮತ್ತು ಬಿಂದಿ ಎಂದು ವಿನೂತನ ಹೆಸರನ್ನ ನೀಡಿದರು. ಪೌರತ್ವದ ವಿರುದ್ಧ ಪ್ರತಿಭಟನೆ ಮಾಡುತ್ತಿರೋರು ಕೇವಲ ಮುಸ್ಲಿಮರು ಮಾತ್ರ ಅಲ್ಲ. ನಮಗೆ ಧರ್ಮ ಮುಖ್ಯವಲ್ಲ ಭಾರತದ ಪೌರತ್ವ ಮುಖ್ಯ ಅನ್ನೋ ಉದ್ದೇಶದಿಂದ ಹಿಂದೂ ಮಹಿಳೆಯರು ಬುರ್ಖಾ ಧರಿಸಿದ್ರೆ, ಮುಸ್ಲಿಂ ಸಮುದಾಯದವರು ಬಿಂದಿ ಹಾಕಿಕೊಂಡಿದ್ದರು. ಈ ಮೂಲಕ ಧರ್ಮದ ಹೆಸರಿನಲ್ಲಿ ಪೌರತ್ವವನ್ನ ನಿಷೇಧ ಮಾಡಲು ಸರ್ಕಾರ ಹೊರಟಿದೆ ಎಂದು ಕಿಡಿಕಾರಿದರು.ಪ್ರತಿಭಟನೆಯಲ್ಲಿ ಲೈಂಗಿಕ ಅಲ್ಪಸಂಖ್ಯಾತರು, ಗಾಯಕಿ ಎಂಡಿ ಪಲ್ಲವಿ ಸೇರಿದಂತೆ ಸಮಾಜದ ಪ್ರಮುಖರು ಭಾಗಿಯಾಗಿದ್ದರು.Sign in to your account
Username or Email Address


Password

 Remember Me


