ಬೆಂಗಳೂರು: ಕೆಲಸದಿಂದ ತೆಗೆದಿದ್ದರಿಂದ ಕೋಪಗೊಂಡ ಕೆಲಸಗಾರನೊಬ್ಬ ಮಾಲೀಕನ ಅಂಗಡಿ ಮುಂದೆ ವಾಮಾಚಾರ ನಡೆಸಿರುವ ಘಟನೆ ಮಹಾಲಕ್ಷ್ಮಿ ಲೇಔಟ್ ಕುರುಬರ ಹಳ್ಳಿಯಲ್ಲಿ ನಡೆದಿದೆ.ಕುರುಬರಹಳ್ಳಿ ಸರ್ಕಲ್‍ನ ಭುವನೇಶ್ವರಿ ಹಾರ್ಡ್ ವೇರ್‌ನಲ್ಲಿ ಶ್ರೀನಿವಾಸ್ ಎಂಬ ಯುವಕ ಕೆಲಸ ಮಾಡುತ್ತಿದ್ದ. ಆದರೆ ಅಂಗಡಿಗಳಲ್ಲಿ ಯಾರು ಇಲ್ಲದೆ ಇದ್ದಾಗ ಶ್ರೀನಿವಾಸ್ ಆಗಾಗ ಕ್ಯಾಶ್ ಕೌಂಟರ್‌ನಿಂದ ಹಣ ಕದಿಯುತ್ತಿದ್ದ. ಇದನ್ನು ಗಮನಿಸಿ ದ ಮಾಲೀಕ ವಿಶ್ವನಾಥ್ ಕೆಲ ದಿನಗಳ ಹಿಂದೆ ಶ್ರೀನಿವಾಸ್‍ನನ್ನು ತೆಗೆದು ಹಾಕಿದ್ದರು.ಮಾಲೀಕ ವಿಶ್ವನಾಥ್ ತನ್ನನ್ನು ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಶ್ರೀನಿವಾಸ್ ಕೋಪಗೊಂಡಿದ್ದ. ಹೀಗಾಗಿ ಭಾನುವಾರ ಬೆಳಗ್ಗೆ ಅಂಗಡಿ ಮುಂಭಾಗದಲ್ಲಿ ಬಂದು ಕುಳಿದಿದ್ದ ಶ್ರೀನಿವಾಸ್, ಕಬ್ಬಿಣದ ಮೊಳೆ, ನಿಂಬೆ ಹಣ್ಣು, ಕರಿ ಎಳ್ಳು, ಅರಿಶಿಣ, ಕುಂಕುಮ ಎರಚಿ ಪರಾರಿಯಾಗಿದ್ದಾನೆ. ಶ್ರೀನಿವಾಸ್ ವಾಮಾಚಾರದ ವಸ್ತುಗಳನ್ನು ಎರಚುವ ದೃಶ್ಯವು ಅಂಗಡಿ ಮುಂಭಾಗದಲ್ಲಿದ್ದ ಸಿಸಿಟಿವಿ ಕ್ಯಾಮೆಯಾದಲ್ಲಿ ಸೆರೆಯಾಗಿದೆ.Sign in to your account
Username or Email Address


Password

 Remember Me


