ಹಾವೇರಿ: ಬುದ್ಧಿಮಾಂದ್ಯ ಯುವತಿಯ ಮೇಲೆ ಅತ್ಯಾಚಾರ ಎಸಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ರಾಣೆಬೆನ್ನೂರು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಮೇಡ್ಲೇರಿ ಗ್ರಾಮದ ದಿಳ್ಳೆಪ್ಪ ಹುಚ್ಚಪ್ಪ ಇಕ್ಕೇರಿ (38) ಬಂಧಿತ ಆರೋಪಿ. ಅದೇ ಗ್ರಾಮದ 23 ವರ್ಷದ ಬುದ್ಧಿಮಾಂದ್ಯ ಯುವತಿಯ ಮೇಲೆ ಶುಕ್ರವಾರ ಅತ್ಯಾಚಾರ ನಡೆಸಿ ತೆಲೆಮರೆಸಿಕೊಂಡಿದ್ದ.ಬುದ್ಧಿಮಾಂದ್ಯ ಯುವತಿಯ ತಾಯಿ ಎಂದಿನಂತೆ ಶುಕ್ರವಾರ ಕೃಷಿ ಕೆಲಸಕ್ಕೆ ಹೋಗಿದ್ದರು. ಈ ವೇಳೆ ಯುವತಿಯ ಮನೆಗೆ ಹೋಗಿದ್ದ ಆರೋಪಿ ದಿಳ್ಳೆಪ್ಪ ಆಕೆಯ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದ. ಈ ಸಂಬಂಧ ಸಂತ್ರಸ್ತೆಯ ತಾಯಿ ದಿಳ್ಳೆಪ್ಪನ ವಿರುದ್ಧ ರಾಣೇಬೆನ್ನೂರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು.ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸು ತನಿಖೆ ಆರಂಭಿಸಿ, ಸಂತ್ರಸ್ತೆಯನ್ನು ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸಿದ್ದರು. ತಪಾಸಣೆ ನಡೆಸಿದ್ದ ವೈದ್ಯರು ಯುವತಿಯ ಮೇಲೆ ಅತ್ಯಾಚಾರ ಎಸಗಿರುವುದನ್ನು ಖಚಿತ ಪಡಿಸಿ, ವರದಿ ನೀಡಿದ್ದರು. ಬಳಿಕ ಆರೋಪಿಗೆ ತೀರ್ವ ಹುಡುಕಾಟ ನಡೆಸಿದ ಪೊಲೀಸರು ಇಂದು ಬಂಧಿಸಿ, ವಿಚಾರಣೆ ನಡೆಸಿ ಕೋರ್ಟಿಗೆ ಹಾಜರು ಪಡಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.Sign in to your account
Username or Email Address


Password

 Remember Me


