ಹುಬ್ಬಳ್ಳಿ: ಓವರ್ ಲೋಡ್‍ನಿಂದ ಲಾರಿಯೊಂದು ನಡು ರಸ್ತೆಯಲ್ಲಿಯೇ ಮುಂದಿನ ಗಾಲಿಗಳನ್ನು ಮೇಲೆತ್ತಿಕೊಂಡು ನಿಂತಿರುವ ಘಟನೆ ನಗರದ ಗೋಕುಲ್ ರಸ್ತೆಯ ಹೋಟೆಲ್ ಲೀಲಾವತಿ ಪ್ಯಾಲೇಸ್ ಬಳಿ ನಡೆದಿದೆ.ಇಂಡಸ್ಟ್ರಿಯಲ್ ಎಸ್ಟೇಟ್ ನಿಂದ ಕಬ್ಬಿಣ ತುಂಬಿಕೊಂಡು ಹೊರಟ್ಟಿದ್ದ ಲಾರಿ ಅತಿಯಾದ ಭಾರದಿಂದ ಮುಂದಿನ ಗಾಲಿಗಳು ಮೇಲಕ್ಕೆ ಎತ್ತಿಕೊಂಡು ನಿಂತುಕೊಂಡಿದೆ. ತಗ್ಗು ಪ್ರದೇಶದಿಂದ ದಿಬ್ಬ ಏರುವ ವೇಳೆ ಕಬ್ಬಿಣದ ತುಂಡುಗಳು ಹಿಂದಕ್ಕೆ ಜಾರಿಕೊಂಡು ಲಾರಿ ಗಾಲಿಗಳು ಮೇಲಕ್ಕೆ ಎದ್ದು ನಿಂತಿವೆ. ಇದಕ್ಕೆ ಓವರ್ ಲೋಡ್ ಕಾರಣ ಎನ್ನಲಾಗಿದೆ.ಇದರಿಂದ ಇಂಡಸ್ಟ್ರಿಯಲ್ ಎಸ್ಟೇಟ್ ರಸ್ತೆ ಸಂಚಾರ ಕೆಲ ಕಾಲ ಸ್ಥಗಿತಗೊಂಡಿತ್ತು. ಕೊನೆಗೆ ಲಾರಿಯನ್ನು ಅನ್ ಲೋಡ್ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.ಓವರ್ ಲೋಡ್ ಹಾಗೂ ರಸ್ತೆ ಸಂಚಾರ ಸ್ಥಗಿತಗೊಳಿಸಿದ ಕುರಿತು ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


 Advertisement 







 Advertisement 




Sign in to your account
Username or Email Address


Password

 Remember Me


