ಶಿವಮೊಗ್ಗ: ಮನೆಯ ಕಿಟಕಿಗೆ ದುಪ್ಪಟ್ಟ ಕಟ್ಟಿಕೊಂಡು ಆಡುತ್ತಿದ್ದ ವೇಳೆ ದುಪ್ಪಟ್ಟ ಬಾಲಕಿಯ ಕುತ್ತಿಗೆಗೆ ಸುತ್ತಿಕೊಂಡ ಪರಿಣಾಮ ಬಾಲಕಿ ಮೃತಪಟ್ಟಿರುವ ಘಟನೆ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣ ಸಮೀಪದ ಯಡೆಹಳ್ಳಿ ಕೆರೆಯಲ್ಲಿ ನಡೆದಿದೆ.ಹರ್ಷಿತಾ (6) ಮೃತಪಟ್ಟ ಬಾಲಕಿ. ಮೃತ ಬಾಲಕಿ ಯಡೇಹಳ್ಳಿ ಕೆರೆ ಗ್ರಾಮದ ವಿಜಯ ಕುಮಾರ್ ಮತ್ತು ಶಶಿಕಲಾ ದಂಪತಿಯ ಪುತ್ರಿಯಾಗಿದ್ದು, ಸೇವಾ ಭಾರತಿ ಶಾಲೆಯಲ್ಲಿ ಒಂದನೇ ತರಗತಿಯನ್ನು ವ್ಯಾಸಂಗ ಮಾಡುತ್ತಿದ್ದಳು.ವಿಜಯ ಕುಮಾರ್ ರಥಬೀದಿಯಲ್ಲಿ ಅಂಗಡಿ ನಡೆಸುತ್ತಿದ್ದು, ಶಶಿಕಲಾ ಮನೆಯಲ್ಲಿದ್ದರು. ಹರ್ಷಿತಾ ಶನಿವಾರ ಸಂಜೆ ದುಪ್ಪಟ್ಟವನ್ನು ಮನೆ ಕಿಟಕಿಗೆ ಕಟ್ಟಿಕೊಂಡಿದ್ದಳು. ಅಲ್ಲದೇ ತನ್ನ ಕುತ್ತಿಗೆಗೆ ಕಟ್ಟಿಕೊಂಡು ಆಟ ಆಡುತ್ತಿದ್ದಳು. ಆಟವಾಡುತ್ತಾ ದುಪ್ಪಟ್ಟ ಬಾಲಕಿಯ ಕತ್ತಿಗೆ ಸುತ್ತುಕೊಂಡಿದೆ. ನಂತರ ಹರ್ಷಿತಾ ಬಿದ್ದು ಒದ್ದಾಡುತ್ತಿರುವುದನ್ನು ಗಮನಿಸಿದ ಆಕೆಯ ಅಣ್ಣ ಕೆಲಸ ಮಾಡುತ್ತಿದ್ದ ತಾಯಿಗೆ ತಿಳಿಸಿದ್ದಾನೆ.ತಾಯಿ ಬಂದು ತಕ್ಷಣ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಆದರೆ ಮಾರ್ಗ ಮಧ್ಯೆಯೇ ಬಾಲಕಿ ಮೃತಪಟ್ಟಿದ್ದಾಳೆ. ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


