ಬೆಂಗಳೂರು: ಬಿಜೆಪಿಗರು ಕೋತಿಗಳು. ಬಿಜೆಪಿಯವರು ಯಾವತ್ತುನೂ ಕೋತಿ ತಾನು ತಿಂದು ಬಿಟ್ಟು, ಮೇಕೆ ಮೂತಿಗೆ ಒರೆಸುವುದು ಅವರ ಪ್ರವೃತ್ತಿ ಅಂತ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಬೈರತಿ ಸುರೇಶ್ ಬಿಜೆಪಿ ನಾಯಕರ ವಿರುದ್ಧ ವ್ಯಂಗ್ಯವಾಡಿದ್ದಾರೆ.ಪೌರತ್ವ ತಿದ್ದುಪಡಿ ಕಾಯ್ದೆಯನ್ನ ವಿರೋಧಿಸಿ ಹೆಬ್ಬಾಳ ಸಾರ್ವಜನಿಕರ ಶಾಂತಿ ಒಕ್ಕೂಟದಿಂದ ಆಯೋಜಿಸಿದ್ದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಬೈರತಿ ಸುರೇಶ್ ಈ ಹೇಳಿಕೆಯನ್ನು ನೀಡಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಪರ ಮಾತನಾಡುವ ಕೆಲ ಬಿಜೆಪಿಗರನ್ನು ಕೋತಿಗಳು ಅನ್ನದಿದ್ರೆ ಮತ್ತೇನು ಹೇಳಬೇಕು ಎಂದು ಪ್ರಶ್ನಿಸಿದರು.ಕಾಯ್ದೆ ಬೇಕು ಬೇಡ ಅಂತಲ್ಲ. ಮೊದಲು ಹೊಟ್ಟೆಗೆ ಊಟ ಕೊಡಿ. ಮಹಿಳೆಯರಿಗೆ ರಕ್ಷಣೆ ಕೊಡಿ ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ಈ ಕಾಯ್ದೆ ಸಂಬಂಧ ದೇಶಾದ್ಯಂತ ದೊಡ್ಡ ಮಟ್ಟದ ಅಹಿಂಸಾತ್ಮಕ ಪ್ರತಿಭಟನೆಗಳು ನಡೆದಿವೆ. ಆದರೆ ನಮ್ಮ ಕರ್ನಾಟಕದಲ್ಲಿ ಯಾವುದೇ ಹಿಂಸಾ ಘಟನೆಗಳು ನಡೆದಿಲ್ಲ. ನಮ್ಮ ಕರ್ನಾಟಕದ ಜನ ಶಾಂತಿ ಸ್ವಭಾವದವರು ಎಂದು ತಿಳಿಸಿದರು.Sign in to your account
Username or Email Address


Password

 Remember Me


