ಹಾವೇರಿ: ಕತ್ತೆ ಸಿಂಹಾಸನದ ಮೇಲೆ ಕುಳಿತಿದೆ, ಡಬ್ಬಿ ಸೌಂಡ್ ಮಾಡುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಸಿ.ಎಂ.ಇಬ್ರಾಹಿಂ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಹಾನಗಲ್‍ನಲ್ಲಿ ಮಾತನಾಡಿದ ಅವರು, ನಮ್ಮ ಪರಿಸ್ಥಿತಿ ಹುಚ್ಚನ ಕೈಯಲ್ಲಿ ಕತ್ತಿ ಕೊಟ್ಟು ಸೇವಿಂಗ್‍ಗೆ ಕುಳಿತಂತಾಗಿದೆ. ಅವನು ಕುತಿಗೆಗೆ ಇಡುತ್ತಾನೋ, ಎಲ್ಲಿಡುತ್ತಾನೋ ಎನ್ನುವುದು ಗೊತ್ತಿಲ್ಲ. ಕುತ್ತಿ ಕೊಟ್ಟು ಬಿಟ್ಟಿದ್ದೇವೆ. ಏನೂ ಮಾತನಾಡುವಂತಿಲ್ಲ. ಒಂದು ವೇಳೆಗೆ ಮಾತನಾಡಿದರೆ ಕತ್ತಿಯನ್ನು ಎಲ್ಲಿ ಹಾಕುತ್ತಾನೋ ಎನ್ನುವುದು ಗೊತ್ತಾಗಲ್ಲ ಎಂದು ಪರೋಕ್ಷವಾಗಿ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ವಿರುದ್ಧ ಕಿಡಿಕಾರಿದರು.ಕರ್ನಾಟಕಕ್ಕೆ ರಾಷ್ಟ್ರೀಯ ಪೌರತ್ವ ನೋಂದಣಿ ಯಾಕೆ ಬೇಕಿತ್ತು? ಇಲ್ಲಿಗೆ ಹೊರಗಿನವರು ಯಾರಾದರೂ ಬಂದಿದ್ದಾರಾ? ಹಳ್ಳಿಗಳ ಮುಖ್ಯಸ್ಥರನ್ನು ಕೇಳಿದರ ಹೊರಗಿನವರು ಯಾರು ಬಂದಿದ್ದಾರೆ ಎನ್ನುವುದು ತಿಳಿಯುತ್ತದೆ. ಅವರಿಗೆ ಹೊರಗಿನಿಂದ ಬಂದವರ ಲಿಸ್ಟ್ ಬೇಕಾಗಿಲ್ಲ. ಇಲ್ಲಿನವರ ಲಿಸ್ಟ್ ಬೇಕಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ನೋಟ್ ಬ್ಯಾನ್ ಆದಾಗ ಬಂದಿರುವ ಧರಿದ್ರ ಇನ್ನೂ ಹೋಗಿಲ್ಲ. ದಲಿತರ ಮೀಸಲಾತಿ ನೋಡಿ ಸಂಸದ ಅನಂತ್‍ಕುಮಾರ್ ಹೆಗ್ಡೆ ಅವರಿಗೆ ಹೊಟ್ಟೆ ನೋವು ಬಂದಿದೆ. ದಲಿತರ ಏಳಿಗೆಯನ್ನು ಅವರಿಂದ ಸಹಿಸಲು ಆಗುತ್ತಿಲ್ಲ. ಎಲ್ಲಿವರೆಗೆ ಇವಿಎಂ ಮೆಷಿನ್ ಇರುತ್ತವೋ ಅಲ್ಲಿಯವರೆಗೆ ಪ್ರಧಾನಿ ಮೋದಿ ಇರುತ್ತಾರೆ. ನಾವು ಸೋಲಿಸುತ್ತಿದ್ದೇವೆ, ಮೆಷಿನ್ ಗೆಲ್ಲಿಸುತ್ತಿದೆ. ಇದನ್ನು ನಾನು ಹಲವು ವರ್ಷಗಳ ಹಿಂದೆನೇ ಹೇಳಿದ್ದೆ ಎಂದರು.Sign in to your account
Username or Email Address


Password

 Remember Me


