ಬೆಂಗಳೂರು: ದಾಳಿ ಮಾಡುವುದಕ್ಕೆ ಹೋದ ಬೆಂಗಳೂರು ಸಿಸಿಬಿ ಪೊಲೀಸರು ಅದೇ ಮನೆಯಲ್ಲೇ ರಾತ್ರಿ ಎಣ್ಣೆ ಪಾರ್ಟಿ ಮಾಡಿರುವ ಆರೋಪ ಕೇಳಿಬಂದಿದೆ.ಅಟಿಕಾ ಗೋಲ್ಡ್ ಕಂಪೆನಿ ಮಾಲೀಕ ಬಾಬು ಅವರ ಬಾಣಸವಾಡಿ ಬಳಿಯ ಕಲ್ಯಾಣ ನಗರದ ಮನೆ ಮೇಲೆ ಕಳೆದ 30ರಂದು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ದಾಳಿ ವೇಳೆ ಮಾಲೀಕ ಬಾಬು ಮನೆಯಲ್ಲಿ ಇರಲಿಲ್ಲ. ಹಾಗಾಗಿ ಪೊಲೀಸರು ಬಾಬುಗಾಗಿ ಕಾಯುತ್ತಿದ್ದರು. ಅಲ್ಲದೆ ರಾತ್ರಿ ಆದರೂ ಪರವಾಗಿಲ್ಲ ಕಾಯೋಣ ಎಂದು ಕಾದು ಕುಳಿತ್ತಿದ್ದರು. ಆದರೆ ಬಾಬು ಮನೆಗೆ ಬಂದಿಲ್ಲ.ತಡರಾತ್ರಿ ಹಿರಿಯ ಅಧಿಕಾರಿಗಳು ಮನೆಗೆ ಹೋದ ನಂತರ ಅಲ್ಲಿಯೇ ಉಳಿದಿದ್ದ ಐವರು ಸಿಸಿಬಿ ಅಧಿಕಾರಿಗಳು ಅದೇ ಮನೆಯಲ್ಲೇ ಎಣ್ಣೆ ಪಾರ್ಟಿ ಮಾಡಿದ್ದಾರೆ. ಪೊಲೀಸರು ಪಾರ್ಟಿ ಮಾಡುವ ದೃಶ್ಯವನ್ನು ಮನೆಯವರು ಸೆರೆಹಿಡಿದಿದ್ದಾರೆ. ಪೊಲೀಸರ ಎಣ್ಣೆ ಪಾರ್ಟಿಯ ವಿಡಿಯೋವನ್ನು ಮಾಲೀಕ ಬಾಬು ಬಿಡುಗಡೆ ಮಾಡುವ ಮೂಲಕ ಪೊಲೀಸರ ನಡೆಯನ್ನು ಪ್ರಶ್ನೆ ಮಾಡಿದ್ದಾರೆ.ಈ ಬಗ್ಗೆ ಪ್ರತಿಕ್ರಿಯಿಸಿದ ಸಿಸಿಬಿ ಹಿರಿಯ ಅಧಿಕಾರಿ, ಇದು ನಮ್ಮ ಪೊಲೀಸರು ಎನ್ನುವುದರ ಬಗ್ಗೆ ಅನುಮಾನವಿದೆ. ವಿಡಿಯೋ ಪರಿಶೀಲನೆ ನಡೆಸಿದ ನಂತರ ತಪ್ಪು ಕಂಡು ಬಂದರೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ.Sign in to your account
Username or Email Address


Password

 Remember Me


