ಚಿಕ್ಕಬಳ್ಳಾಪುರ: ಕೋತಿಗಳನ್ನು ಕಂಡರೆ ಶ್ವಾನಗಳಿಗೆ ಎಲ್ಲಿಲ್ಲದ ಕೋಪ. ಕೋತಿಗಳಿಗೂ ಅಷ್ಟೇ ಶ್ವಾನಗಳನ್ನು ಕಂಡರೆ ಅಷ್ಟಕ್ಕಷ್ಟೇ. ಗುರ್ ಗುರ್ ಅಂತ ಗುರಾಯಿಸಿಕೊಂಡು ಅಟ್ಯಾಕ್ ಮಾಡಿಬಿಡುತ್ತವೆ. ಆದರೆ ಪ್ರೇಮಧಾಮ ನಂದಿಗಿರಿಧಾಮದಲ್ಲಿ ನಾಯಿಗಳು-ಕೋತಿಗಳ ಪ್ರೀತಿ, ಪ್ರೇಮ, ಸ್ನೇಹಕ್ಕೆ ಪ್ರವಾಸಿಗರು ಫಿದಾ ಆಗಿದ್ದಾರೆ.ಹೌದು, ವಿಶ್ವವಿಖ್ಯಾತ ಪ್ರವಾಸಿತಾಣ ನಂದಿಗಿರಿಧಾಮದಲ್ಲಿ ಬೀಡುಬಿಟ್ಟಿರುವ ಕೋತಿಗಳ ಹಿಂಡು ಹಾಗೂ ಎರಡು ನಾಯಿಗಳು ತುಂಟಾಟಕ್ಕೆ ಪ್ರವಾಸಿಗರು ಮನಸೋಲುವಂತಾಗಿದೆ. ನಂದಿಗಿರಿಧಾಮದ ಮಯೂರ ಹೋಟೆಲ್ ವೃತ್ತದಲ್ಲಿ ಹೋಟೆಲ್, ಅಂಗಡಿ ಮುಂಗಟ್ಟುಗಳು ಇರುವ ಕಾರಣ ನೂರಾರು ಕೋತಿಗಳು ಬೀಡುಬಿಟ್ಟಿವೆ. ಈ ಕೋತಿಗಳ ಜೊತೆಗೆ ಇಲ್ಲಿರುವ ಎರಡು ಬೀದಿ ನಾಯಿಗಳು ಕಾಲೆಳೆದುಕೊಂಡು ತುಂಟಾಟ ಮಾಡುತ್ತಿರುವ ದೃಶ್ಯಗಳು ಪ್ರೇಮಿಗಳನ್ನು ಸಹ ನಾಚಿಸುವಂತಿದೆ.ನಾಯಿಗಳು ಸುಮ್ಮನಿದ್ದರೂ ಸುಮ್ಮನಿರದ ಕೋತಿಗಳು ನಾಯಿಯ ಬಾಲ ಎಳೆಯುವುದು, ಕಾಲು ಕೆರೆಯುವುದು, ಕಾಲು ಕೆರೆಯುತ್ತಾ ಕುಹುಕು ಮಾಡುತ್ತಾ, ಕೆಣಕುವುದು ಸಿಕ್ಕಾಗ ತಲೆಗೆ ಹೊಡೆಯುವುದು ಹೀಗೆ ಮಾಡುತ್ತ ನಾಯಿಗಳ ಜೊತೆ ಕೀಟಲೆ ಮಾಡುತ್ತಿವೆ. ನಂದಿಗಿರಿಧಾಮದ ಹಚ್ಚ-ಹಸಿರು ಸೊಬಗಿನ ಜೊತೆ ನಾಯಿ-ಕೋತಿಗಳ ತುಂಟಾಟ ಪ್ರವಾಸಿಗರ ಪಾಲಿಗಂತೂ ಸಖತ್ ಖುಷಿ ತರುತ್ತಿದೆ. ಮಂಕಿ-ಡಾಗ್ಸ್ ಲವ್‍ಗೆ ಪ್ರವಾಸಿಗರು ಮನಸೋಲುವಂತಾಗಿದೆ.Sign in to your account
Username or Email Address


Password

 Remember Me


