ಬೆಂಗಳೂರು: ರೆನಾಲ್ಟ್ ಡಸ್ಟರ್ ಕಾರಿಗೆ ನಕಲಿ ನಂಬರ್ ಪ್ಲೇಟ್ ಬಳಸಿ ತೆರಿಗೆ ವಂಚನೆ ಮಾಡುತ್ತಿದ್ದ ಆಸಾಮಿ ಯಶವಂತಪುರ ಆರ್.ಟಿ.ಓ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ.ಅನ್ನಪೂರ್ಣೇಶ್ವರಿ ನಗರದ ಡಿ. ಸತೀಶ್ ಕುಮಾರ್ ಎಂಬುವವರಿಗೆ ಸೇರಿದ ಕೆಎ-01 ಎಫ್‍ಎನ್-6223 ಸಂಖ್ಯೆಯ ವಾಹನವನ್ನು ಜಪ್ತಿ ಮಾಡಲಾಗಿದೆ. ಈ ವಾಹನವನ್ನು ಪಂಜಾಬ್‍ನಿಂದ ಬೆಂಗಳೂರಿಗೆ ತರಲಾಗಿದೆ. ತೆರಿಗೆ ಹಣ ಜಾಸ್ತಿ ಇರುವುದರಿಂದ ಸ್ನೇಹಿತ ನೀಡಿದ ಐಡಿಯಾ ಬಳಸಿ, ಪಿಎ ಇದ್ದ ನಂಬರ್ ಪ್ಲೇಟ್ ಅನ್ನು ಕೆಎ ಎಂದು ಚೆಂಚ್ ಮಾಡಿರುವುದಾಗಿ ಆರ್.ಟಿ.ಓ ಅಧಿಕಾರಿಗಳ ಮುಂದೆ ಕಾರಿನ ಮಾಲೀಕ ಸತ್ಯವನ್ನ ಬಿಚ್ಚಿಟ್ಟಿದ್ದಾನೆ.ನಂಬರ್ ಪ್ಲೇಟ್ ನಲ್ಲಿ ಪಿಬಿ-01, ಎಫ್‍ಎನ್-6223 ಇದ್ದ ಜಾಗದಲ್ಲಿ ಪಿಬಿ ತೆಗೆದು ಕೆಎ ಎಂದು ಮಾಡಿ ಕೆಎ-01, ಎಫ್‍ಎನ್-6223 ಎಂದು ಬದಲಿಸಿ ನಕಲಿ ನಂಬರ್ ಪ್ಲೇಟ್ ಮಾಡಿಸಿದ್ದಾನೆ ಕಾರಿನ ಮಾಲೀಕ ಸತೀಶ್. ಅನ್ನಪೂರ್ಣೇಶ್ವರಿ ನಗರದಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದ ಯಶವಂತಪುರ ಆರ್.ಟಿ.ಓ ಹಿರಿಯ ಇನ್ಸ್ ಪೆಕ್ಟರ್ ರಾಜಣ್ಣ ಅವರ ಕಣ್ಣಿಗೆ ಈ ನಕಲಿ ನಂಬರ್ ಪ್ಲೇಟ್ ಕಾರು ಬಿದ್ದಿದೆ.ಬೆಂಗಳೂರು ಆರ್.ಟಿ.ಓ ವ್ಯಾಪ್ತಿಯಲ್ಲಿ ಎಫ್‍ಎನ್ ಸಿರೀಸ್ ನಂಬರ್ ಇಲ್ಲ ಎಂದು ಯೋಚಿಸಿದ ರಾಜಣ್ಣ, ಕೂಡಲೇ ಕಾರನ್ನ ತಡೆದು ಪರಿಶೀಲನೆ ನಡೆಸಿದಾಗ ನಕಲಿ ನಂಬರ್ ಪ್ಲೇಟ್ ಬಳಸಿರುವುದು ಬೆಳಕಿಗೆ ಬಂದಿದೆ. ಕಾರ್ ಮಾಲೀಕ ಅಯ್ಯಪ್ಪ ಮಾಲೆ ಧರಿಸಿದ್ದರಿಂದ ಶಬರಿ ಮಲೆಗೆ ಹೋಗಿ ಬಂದ ಬಳಿಕ ಕಾರಿನ ದಾಖಲೆಗಳನ್ನು ಆರ್.ಟಿ.ಓ ಅಧಿಕಾರಿಗಳಿಗೆ ನೀಡುವುದಾಗಿ ತಿಳಿಸಿದ್ದಾನೆ.Sign in to your account
Username or Email Address


Password

 Remember Me


