ಬೆಂಗಳೂರು: ಲಾಡ್ಜ್ ನಲ್ಲಿ ಕಂಠಪೂರ್ತಿ ಕುಡಿದು ಗಲಾಟೆ ಮಾಡುತ್ತಿದ್ದ ಹುಡುಗರನ್ನ ಪ್ರಶ್ನೆ ಮಾಡಿದ್ದ ಮಾಲೀಕನಿಗೆ, ಕುಡಿದ ಅಮಲಿನಲ್ಲಿದ್ದ ಪುಂಡರ ಗ್ಯಾಂಗ್ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಬೆಂಗಳೂರಿನ ದೊಡ್ಡ ಬಾಣಸವಾಡಿಯಲ್ಲಿ ನಡೆದಿದೆ.ಸಂತೋಷ್, ಹರೀಶ್, ಪ್ರಕಾಶ್, ರಂಜಿತ್ ಕುಮಾರ್ ಮತ್ತು ಸಂಜಯ್ ದೊಡ್ಡ ಬಾಣಸವಾಡಿಯಲ್ಲಿರುವ ಒಲಿವ್ ರೆಸಿಡೆನ್ಸಿ ಬಾರ್ ನಲ್ಲಿ ಒಂದು ರೂಂ ಬಾಡಿಗೆ ಪಡೆದಿರುತ್ತಾರೆ. ಡಿಸೆಂಬರ್ 31 ರ ರಾತ್ರಿಪೂರ್ತಿ ಎಣ್ಣೆ ಹೊಡೆದು ಹೊಸ ವರ್ಷ ಸಂಭ್ರಮಾಚರಣೆ ಮಾಡಿದ್ದಾರೆ. ಬೆಳಗ್ಗಿನ ಜಾವ ನಾಲ್ಕು ಗಂಟೆಗೆ ಗಲಾಟೆ ಮಾಡಿಕೊಂಡು ಲಾಡ್ಜ್ ನಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ.ಯುವಕರ ಪುಂಡಾಟ ನೋಡಿದ ಲಾಡ್ಜ್ ಮಾಲೀಕ ರೂಂ ಮೊದಲು ಖಾಲಿ ಮಾಡುವಂತೆ ತಿಳಿಸಿದ್ದಾನೆ. ಮೊದಲೇ ರಾತ್ರಿ ಎಲ್ಲಾ ಮದ್ಯದ ನಶೆಯಲ್ಲಿದ್ದ ಪುಂಡರು ಮಾಲೀಕ ಆರ್ಷದ್ ಮೇಲೆ ಹಲ್ಲೆ ಮಾಡಿದ್ದಾರೆ. ಮಾಲೀಕ ಆರ್ಷದ್ ತಿರುಗಿ ಬೀಳಲು ಮುಂದಾಗುತ್ತಿದ್ದಂತೆ ಕೈಯಲ್ಲಿದ್ದ ಚಾಕುವಿನಿಂದ ತಲೆಗೆ ಹೊಡೆದಿದ್ದಾರೆ. ಘಟನೆಯಲ್ಲಿ ಆರ್ಷದ್ ಗೆ ತೀವ್ರ ವಾಗಿ ಗಾಯವಾಗುತ್ತಿದ್ದಂತೆ ದುಷ್ಕರ್ಮಿಗಳು ಅಲ್ಲಿಂದ ಕಾಲ್ಕಿತ್ತಿದ್ದಾರೆ.ಆರೋಪಿಗಳು ಲಾಡ್ಜ್ ನಲ್ಲಿ ರೂಂ ಪಡೆಯುವ ಮುನ್ನ ಕೊಟ್ಟಿರುವ ಆಧಾರ್ ಪ್ರತಿ ಹಾಗೂ ಹಲ್ಲೆ ಮಾಡಿದ ಸಿಸಿಟಿವಿ ದೃಶ್ಯದ ಮೇಲೆ ಆರ್ಷದ್ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬಾಣಸವಾಡಿ ಪೊಲೀಸರು ಘಟನೆ ನಡೆದ 24 ಗಂಟೆಯ ಒಳಗಡೆ ಆರೋಪಿಗಳನ್ನು ಬಂಧಿಸಿದ್ದಾರೆ. ಘಟನೆ ಸಂಬಂಧ ಒಟ್ಟು ಆರು ಮಂದಿಯನ್ನು ಬಂಧಿಸಿರುವ ಬಾಣಸವಾಡಿ ಪೊಲೀಸರು ಆರೋಪಿಗಳನ್ನು ಹೆಚ್ಚಿನ ತನಿಖೆಗೆ ಒಳಪಡಿಸಿದ್ದಾರೆ.Sign in to your account
Username or Email Address


Password

 Remember Me


