ವಿಜಯಪುರ: ಪ್ರಿಯಕರನ ಜೊತೆ ಮೂರು ಮಕ್ಕಳ ತಾಯಿ ಓಡಿ ಹೋದ ಘಟನೆ ವಿಜಯಪುರದಲ್ಲಿ ನಡೆದಿದೆ.ಜಿಲ್ಲೆಯ ತಾಳಿಕೋಟೆ ತಾಲೂಕಿನ ಮಡಿಕೇಶ್ವರ ಗ್ರಾಮದ ಗೃಹಿಣಿ ಯಲ್ಲಮ್ಮ ಅದೇ ಗ್ರಾಮದ ಯುವಕ ಪ್ರಭು ಎಂಬವನ ಜೊತೆ 7 ತಿಂಗಳ ಕಾಲ ಪುಣೆಗೆ ಓಡಿ ಹೋಗಿದ್ದಳು. 7 ತಿಂಗಳು ಅಲ್ಲಿ ಇಬ್ಬರು ಸುತ್ತಿ ನಂತರ ಯಲಮ್ಮನನ್ನು ಗ್ರಾಮಕ್ಕೆ ಕರೆ ತಂದು ನಡುಬೀದಿಯಲ್ಲಿ ಬಿಟ್ಟು ಪ್ರಿಯಕರ ಪ್ರಭು ಪರಾರಿಯಾಗಿದ್ದಾನೆ.ಮೂವರು ಮಕ್ಕಳನ್ನು ಬಿಟ್ಟು ಪ್ರಿಯಕರನ ಜೊತೆ ಓಡಿ ಹೋಗಿದ್ದಕ್ಕೆ ಯಲ್ಲಮ್ಮನ ಪತಿ ಹಾಗೂ ಆತನ ಮನೆಯವರು ಮೂರು ಮಕ್ಕಳ ಸಮೇತ ಮರಳಿ ಮನೆಗೆ ಬರದಂತೆ ಆಕೆಯನ್ನು ಹೊರ ಹಾಕಿದ್ದಾರೆ. ಈಗ ಬೇರೆ ದಾರಿಯಿಲ್ಲದೆ ಪ್ರಿಯಕರನ ಮನೆ ಎದುರು ಮೂರು ಮಕ್ಕಳ ಸಮೇತ ಯಲ್ಲಮ್ಮ ಧರಣಿ ನಡೆಸುತ್ತಿದ್ದಾಳೆ.ಪ್ರಿಯಕರ ಪ್ರಭು ಮಾತ್ರ ಯಲ್ಲಮ್ಮಳನ್ನು ಮರಳಿ ಊರಿಗೆ ಕರೆ ತಂದು ಬಿಟ್ಟು ನಂತರ ಪರಾರಿಯಾಗಿದ್ದಾನೆ. ಇತ್ತ ಪ್ರಭು ಮನೆಯವರು ಮನೆಗೆ ಬೀಗ ಹಾಕಿ ಜಾಗ ಖಾಲಿ ಮಾಡಿದ್ದಾರೆ. ಆದರೆ ಯಲ್ಲಮ್ಮ ಮೂವರು ಮಕ್ಕಳ ಸಮೇತ ಬಂದು ಪ್ರಭು ಮನೆ ಮುಂದೆ ನ್ಯಾಯಕ್ಕಾಗಿ ಕಣ್ಣೀರು ಹಾಕುತ್ತಾ ಕುಳಿತಿದ್ದಾಳೆ.ಈ ಬಗ್ಗೆ ಯಲ್ಲಮ್ಮ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾಳೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಯಲ್ಲಮ್ಮಗೆ ಡಿಎಸ್‍ಎಸ್ ಸೇರಿದಂತೆ ವಿವಿಧ ಮಹಿಳಾ ಸಂಘಟನೆಗಳು ಸಾಥ್ ನೀಡಿವೆ. ಅಲ್ಲದೆ ಆಕೆಯನ್ನು ಪ್ರಿಯಕರ ಪ್ರಭು ಮನೆಗೆ ಸೇರಿಸಲು ಸಂಘಟನೆಗಳ ಪ್ರಯತ್ನ ಮಾಡುತ್ತಿವೆ.Sign in to your account
Username or Email Address


Password

 Remember Me


