ಚಿಕ್ಕಬಳ್ಳಾಪುರ: ಸಿಮೆಂಟ್ ಲೋಡ್ ತುಂಬಿಕೊಂಡು ಸರ್ವಿಸ್ ರಸ್ತೆಯಿಂದ ಹೆದ್ದಾರಿಗೆ ಬರುತ್ತಿದ್ದ ಲಾರಿ ಇದ್ದಕ್ಕಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಮುಗುಚಿ ಬಿದ್ದಿದೆ. ಮುಗುಚಿ ಬಿದ್ದ ಪರಿಣಾಮ ಲಾರಿಯೇ ಸಂಪೂರ್ಣ ಉಲ್ಟಾ ಪಲ್ಟಾ ಆಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕು ರಾಷ್ಟ್ರೀಯ ಹೆದ್ದಾರಿ 7ರ ನಾಗಾರ್ಜುನ ಕಾಲೇಜು ಸೇತುವೆ ಬಳಿ ನಡೆದಿದೆ.ಖಾಸೀಂ ಅಪಘಾತದಲ್ಲಿ ಪಾರಾದ ಲಾರಿ ಚಾಲಕ. ಲಾರಿ ಕಡಪದಿಂದ ಬೆಂಗಳೂರಿಗೆ ಬರುತ್ತಿತ್ತು. ಈ ವೇಳೆ ನಂದಿ ಕ್ರಾಸ್ ಸರ್ವಿಸ್ ರಸ್ತೆಯಿಂದ ಬೆಂಗಳೂರು ಕಡೆಗೆ ಬರುವಾಗ ಹೆದ್ದಾರಿಯ ಹಂಪ್ ಹತ್ತುವ ಭರದಲ್ಲಿ ಚಾಲಕನ ನಿಯಂತ್ರಣ ತಪ್ಪಿದೆ.ಮಂದೆ ಹಂಪ್ ಹತ್ತಬೇಕಿದ್ದ ಲಾರಿ ಏಕಾಏಕಿ ಹಿಂದಕ್ಕೆ ಬಂದು ಕುಸಿದು ಬಿದ್ದು ಸಂಪೂರ್ಣವಾಗಿ ಪಲ್ಟಿಯಾಗಿದೆ. ಲಾರಿ ಸಂಪೂರ್ಣ ಉಲ್ಟಾ ಪಲ್ಟಾ ಆಗಿದ್ರೂ ಘಟನೆಯಲ್ಲಿ ಚಾಲಕ ಪವಾಡ ಸದೃಶ್ಯ ರೀತಿಯಲ್ಲಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.ಈ ಸಂಬಂಧ ನಂದಿಗಿರಿಧಾಮ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಲಾರಿ ತೆರವುಗೊಳಿಸಲು ಕ್ರಮ ಕೈಗೊಂಡಿದ್ದಾರೆ.Sign in to your account
Username or Email Address


Password

 Remember Me


