ಕಲಬುರಗಿ: ಪೌರತ್ವ ಕಾಯ್ದೆ(ಸಿಎಎ) ತಪ್ಪು ತಿಳುವಳಿಕೆಯಿಂದ ಈಗಾಗಲೇ ದೇಶದಲ್ಲಿ ಹಲವೆಡೆ ವಿರೋಧ ವ್ಯಕ್ತವಾಗುತ್ತಿದೆ. ಹೀಗಾಗಿ ಈ ಕಾಯ್ದೆಯ ಜಾಗೃತಿಗಾಗಿ ಕಲಬುರಗಿಯಲ್ಲಿ ಜನವರಿ 11ರಂದು ಬೃಹತ್ ರ‍್ಯಾಲಿ ಮಾಡಿ ಜನರಲ್ಲಿ ಜಾಗೃತಿ ಮೂಡಿಸಲು ಕಲಬುರಗಿ ನಾಗರಿಕ ಸಮಿತಿ ಸಜ್ಜಾಗಿದೆ.ಈ ಕಾರ್ಯಕ್ರಮವನ್ನು ಯಶಸ್ವಿ ಮಾಡಲು ಶರಬಸವೇಶ್ವರ ಸಂಸ್ಥಾನದ ಶ್ರೀ ಲಿಂಗರಾಜಪ್ಪ ಅಪ್ಪಾ, ಸಿದ್ದರಾಮಯ್ಯ ಹೀರೆಮಠ ಸೇರಿದಂತೆ ಹಲವರು ಮುಂದಾಳತ್ವ ವಹಿಸಿದ್ದಾರೆ. ಈಗಾಗಲೇ ಹಲವು ಶಾಲಾ-ಕಾಲೇಜುಗಳಿಗೆ ಹೋಗಿ ಈ ತಂಡ ಜಾಗೃತಿ ಮೂಡಿಸಲಾಗುತ್ತಿದ್ದು, ಜನವರಿ 11ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ನಗರೇಶ್ವರ ಶಾಲೆಯಿಂದ ಮೇರವಣಿಗೆ ಆರಂಭಿಸಿ, ಕಿರಾಣಾ ಮಾರ್ಕೆಟ್, ಸೂಪರ್ ಮಾರ್ಕೆಟ್ ಮುಖಾಂತರ ಜಿಲ್ಲಾಧಿಕಾರಿ ಕಚೇರಿವರೆಗೆ ಸುಮಾರು 2 ಕಿಮೀ ಉದ್ದದ ತ್ರಿವರ್ಣ ಧ್ವಜ ಹಿಡಿದು ಮೆರವಣಿಗೆ ಸಾಗಲಿದೆ.ಕಾರ್ಯಕ್ರಮ ಯಶಸ್ವಿ ಮಾಡಲು ಹಲವು ಮಠಾಧೀಶರು ವಿವಿಧ ಸಮಾಜದ ಮುಖಂಡರನ್ನು ಈಗಾಗಲೇ ಭೇಟಿ ಮಾಡಿ ಬೆಂಬಲ ಕೇಳಿದ್ದಾರೆ. ಈ ಮೂಲಕ ಯಾವ ಜಿಲ್ಲೆಯಲ್ಲಿ ಪೌರತ್ವ ವಿರೋಧಿಸಿ ತೀವ್ರ ಹೋರಾಟ ನಡೆದಿತ್ತು, ಅದೇ ಸ್ಥಳದಿಂದ ಇದೀಗ ಜಾಗೃತಿ ಅಭಿಯಾನ ನಡೆಯುತ್ತಿದೆ.


 Advertisement 







 Advertisement 




Sign in to your account
Username or Email Address


Password

 Remember Me


