ಮೈಸೂರು: ಸರಗಳ್ಳತನ ಮಾಡಿ ತಕ್ಷಣ ನಂಬರ್ ಪ್ಲೇಟ್ ಬದಲಿಸಿ ಪರಾರಿಯಾಗುತ್ತಿದ್ದ ಚಾಲಕಿ ಕಳ್ಳನನ್ನು ಮೈಸೂರಿನ ವಿದ್ಯಾರಣ್ಯಪುರಂ ಪೊಲೀಸರು ಬಂಧಿಸಿದ್ದಾರೆ.ಸೈಯದ್ ಉಮರ್(39) ಬಂಧಿತ ಆರೋಪಿ. ಬಂಧಿತನಿಂದ 9.32 ಲಕ್ಷ ಮೌಲ್ಯದ 233 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಆರೋಪಿ ಸೈಯದ್ ಉಮರ್ ಮೈಸೂರಿನ ಉದಯಗಿರಿಯ ಸತ್ಯಾನಗರ ನಿವಾಸಿ ಎಂದು ತಿಳಿದು ಬಂದಿದೆ.ಒಂಟಿ ಮಹಿಳೆಯರೇ ಈತನ ಟಾರ್ಗೆಟ್ ಆಗಿದ್ದು, ಸರಗಳ್ಳತನದ ನಂತರ ಆಕ್ಟೀವಾ ಹೋಂಡಾ ನಂಬರ್ ಪ್ಲೇಟ್ ಬದಲಿಸಿ ಪರಾರಿಯಾಗುತ್ತಿದ್ದನು. ಜೆಪಿ ನಗರದಲ್ಲಿ ವಾಹನ ತಪಾಸಣೆ ವೇಳೆ ಆರೋಪಿ ಸಿಕ್ಕಿಬಿದ್ದಿದ್ದಾನೆ. ಸ್ಕೂಟರ್ ಡಿಕ್ಕಿಯಲ್ಲಿ ಎರಡು ನಂಬರ್ ಪ್ಲೇಟ್‍ಗಳು ಪತ್ತೆಯಾಗಿದ್ದವು. ಪೊಲೀಸರು ಅನುಮಾನಗೊಂಡು ವಿಚಾರಣೆ ನಡೆಸಿದ್ದಾಗ ಸತ್ಯ ಬಯಲಾಗಿದೆ.ಆರೋಪಿ ಬಳಿ ಇದ್ದ 7 ಚಿನ್ನದ ಸರ, 1 ತಾಳಿ, 2 ಗುಂಡು, 4 ಚಿನ್ನದ ಕಾಸು ಹಾಗೂ ಕೃತ್ಯಕ್ಕೆ ಬಳಸಿದ ಆಕ್ಟೀವಾ ಹೋಂಡಾ ವಶಪಡಿಸಿಕೊಳ್ಳಲಾಗಿದೆ. ಮೈಸೂರಿನ ವಿದ್ಯಾರಣ್ಯಪುರಂನ 5 ಪ್ರಕರಣ, ಆಲನಹಳ್ಳಿ ಹಾಗೂ ಕುವೆಂಪುನಗರ ಠಾಣೆಯಲ್ಲಿ ತಲಾ ಒಂದು ಪ್ರಕರಣ ಪತ್ತೆಯಾಗಿದೆ. ಸದ್ಯಕ್ಕೆ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.Sign in to your account
Username or Email Address


Password

 Remember Me


