ಚಿಕ್ಕೋಡಿ: ಬಿಜೆಪಿ ಶಾಸಕ ಪಿ ರಾಜೀವ್ ತಮ್ಮ ವಿಶಿಷ್ಟ ನಡುವಳಿಕೆಯಿಂದ ಸದಾ ಒಂದಿಲ್ಲಾ ಒಂದು ಸುದ್ದಿಯಲ್ಲಿ ಇರುತ್ತಾರೆ. ಕೆಲ ದಿನಗಳ ಹಿಂದೆ ಶಾಲಾ ಮಕ್ಕಳಿಗೆ ಸಂವಿಧಾನ ಹಾಗೂ ವಿಜ್ಞಾನದ ಬಗ್ಗೆ ಪಾಠ ಮಾಡಿ ‘ಶಾಸಕ ಶಿಕ್ಷಕ’ ಎಂದು ಸುದ್ದಿಯಾಗಿದ್ದ ಅವರು ಬುಗರಿ ಆಟವಾಡಿ ಹಾಗೂ ತಮ್ಮ ಕ್ಷೇತ್ರದಲ್ಲಿ ಸೈಕಲ್ ಮೂಲಕ ಕ್ಷೇತ್ರದ ಜನರ ಬಳಿ ತೆರಳಿ ಮತ್ತೆ ಸುದ್ದಿಯಾಗಿದ್ದಾರೆ.ರಾಜಕೀಯ ಮರೆತು ತಮ್ಮ ಕಚೇರಿ ಮುಂದೆ ಪಿ ರಾಜೀವ್ ಬುಗರಿ ಆಡಿರುವ ವಿಡಿಯೋ ಹಾಗೂ ಕ್ಷೇತ್ರದಲ್ಲಿ ಸೈಕಲ್ ಮೇಲೆ ಪ್ರಯಾಣ ಮಾಡಿರುವ ವಿಡಿಯೋಗಳು ಫುಲ್ ವೈರಲ್ ಆಗಿವೆ. ನೆಲಕ್ಕೆ ಬುಗುರಿ ಎಸೆದು ದಾರದ ಸಹಾಯದಿಂದ ಕೈಯಲ್ಲಿ ಬುಗುರಿ ತಿರುಗಿಸಿರುವ ವಿಡಿಯೋ ಹಾಗೂ ಸೈಕಲ್ ತುಳಿಯುತ್ತಿರುವ ವಿಡಿಯೋಗೆ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಕುಡಚಿ ಮೀಸಲು ಮತಕ್ಷೇತ್ರದ ಬಿಜೆಪಿ ಶಾಸಕರಾಗಿರುವ ಪಿ ರಾಜೀವ್ ಅವರು, ಸದ್ಯ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.Sign in to your account
Username or Email Address


Password

 Remember Me


