ಯಾದಗಿರಿ: ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ ಬಂದರೂ ನನ್ನನ್ನು ಏನು ಮಾಡಲ್ಲ, ನೀನು ಯಾವ ಲೆಕ್ಕ ಅಂತ ನಗರಸಭೆ ಕಮಿಷನರ್‌ಗೆ ಯಾದಗಿರಿ ಕುಂಚ ಕಲಾವಿದನೋರ್ವ ತರಾಟೆಗೆ ತೆಗೆದುಕೊಂಡಿದ್ದಾನೆ.ಕೆಲಸ ಕೊಡದಕ್ಕೆ ಕೋಪಗೊಂಡ ಕುಂಚ ಕಲಾವಿದ, ಯಾದಗಿರಿ ನಗರಸಭೆ ಕಮಿಷನರ್ ರಮೇಶ್‍ಗೆ ನಗರದ ಡಿಸಿ ಸರ್ಕಾರಿ ಮನೆ ಎದುರು ನಡು ರಸ್ತೆಯಲ್ಲಿ ಮಲ್ಲು ಆರ್ಟ್ಸ್ ಮಾಲೀಕ ಮಲ್ಲಿಕಾರ್ಜುನ ಅವಾಜ್ ಹಾಕಿದ್ದಾನೆ.ನಗರ ಸುಂದರವಾಗಿ ಕಾಣಲು ಪ್ರವಾಸೋದ್ಯಮ, ನಗರಸಭೆ ಮತ್ತು ಜಿಲ್ಲಾಡಳಿತದಿಂದ ಸರ್ಕಾರಿ ಕಟ್ಟಡಗಳ ಗೋಡೆಗಳಿಗೆ ಕಲಾಕೃತಿಗಳನ್ನು ಬಿಡಿಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಸರ್ಕಾರಿ ಶಾಲೆಗಳ ಚಿತ್ರಕಲಾ ಶಿಕ್ಷಕರನ್ನು ಬಳಸಿಕೊಳ್ಳಲಾಗುತ್ತಿದೆ. ಇದು ಖಾಸಗಿ ಕುಂಚ ಕಲಾವಿದರ ಹೊಟ್ಟೆ ಮೇಲೆ ಹೊಡೆದಂತೆ ಎನ್ನುವುದು ಕಲಾವಿದನ ಆರೋಪವಾಗಿದೆ. ಹೀಗಾಗಿ ನಡು ರಸ್ತೆಯಲ್ಲಿ ನಗರದ ಸಭೆ ಕಮಿಷನರ್ ರಮೇಶ್‍ಗೆ ಬೈದು ಕುಂಚ ಕಲಾವಿದ ತನ್ನ ಆಕ್ರೋಶ ಹೊರಹಾಕಿದ್ದಾನೆ.Sign in to your account
Username or Email Address


Password

 Remember Me


