ಬೆಂಗಳೂರು: ಬಾಲಿವುಡ್ ನಿರ್ಮಾಪಕಿ ವಂದನಾ ಹಾಗೂ ಕ್ರಿಕೆಟಿಗ ಅಮಿತ್ ಮಿಶ್ರಾ ಸಂಬಂಧವನ್ನ ಪ್ರಸ್ತಾಪಿಸಿ ನೀಡಿದ್ದ ಹೇಳಿಕೆಯೇ ಸಂಜನಾ ಗಲ್ರಾನಿಯನ್ನು ಸಂಕಷ್ಟಕ್ಕೆ ತಳ್ಳುತ್ತಾ ಅನ್ನೋ ಅನುಮಾನವೊಂದು ಎದ್ದಿದೆ.ಹೌದು. ಸ್ಯಾಂಡಲ್ ವುಡ್ ನಟಿ ಸಂಜನಾ ವಿರುದ್ಧ ನಿರ್ಮಾಪಕಿ 4 ಕೋಟಿ ಮಾನನಷ್ಟ ಮೊಕದ್ದೊಮೆ ಹೂಡಿದ್ದಾರೆ. ವಂದನಾ ಹಾಗೂ ಅಮಿತ್ ಮಿಶ್ರಾ ಸಂಬಂಧವನ್ನ ಪ್ರಸ್ತಾಪಿಸಿ ನೀಡಿದ್ದ ಹೇಳಿಕೆಯೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.ಈ ಅನುಮಾನಕ್ಕೆ ಪುಷ್ಠಿ ಎಂಬಂತೆ ಸಂಜನಾ ಗಲ್ರಾನಿ ಮಾಧ್ಯಮಗಳಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ. ಪತ್ರದಲ್ಲಿ ಪ್ರಮುಖವಾಗಿ ಗೌರವಾನ್ವಿತ ಕ್ರಿಕೆಟಿಗ ವಿಚಾರ ಪ್ರಸ್ತಾಪದ ಬಗ್ಗೆ ಉಲ್ಲೇಖ ಮಾಡಿದ್ದಾರೆ. ನಿರ್ಮಾಪಕಿ ವಂದನಾ ಹಾಗೂ ಕ್ರಿಕೆಟಿಗ ಸಂಬಂಧದ ಬಗ್ಗೆ ಗೂಗಲ್ ನಲ್ಲಿ ಸಾಕಷ್ಟು ಸುದ್ದಿಗಳಿವೆ. ಅದನ್ನು ನಾನು ಪ್ರಸ್ತಾಪಿಸಿ ಅಂದು ಹೇಳಿಕೆ ನೀಡಿದ್ದೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಸಂಜನಾ ವಿರುದ್ಧ 4 ಕೋಟಿ ರೂ. ಮಾನನಷ್ಟ ಮೊಕದ್ದಮೆಅಷ್ಟೇ ಅಲ್ಲದೆ ವಂದನಾ ಬಿಡುಗಡೆ ಮಾಡಿರುವ ವಿಡಿಯೋ ಸಂಪೂರ್ಣವಾಗಿ ಸುಳ್ಳು ಆರೋಪಗಳಾಗಿವೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಹೀಗಾಗಿ ಮಾಧ್ಯಮಗಳು ಯಾವುದೇ ಕಾರಣಕ್ಕೂ ನಿರ್ಮಾಪಕಿ ವಂದನಾ ಹೇಳಿಕೆ ವಿಚಾರವಾಗಿ ನನ್ನನ್ನು ಸಂಪರ್ಕಿಸ ಬೇಡಿ ಎಂದು ಸ್ಪಷ್ಟನೆ ಪತ್ರದಲ್ಲಿ ಖಾರವಾಗಿಯೇ ಉಲ್ಲೇಖ ಮಾಡಿದ್ದಾರೆ.Sign in to your account
Username or Email Address


Password

 Remember Me


