ಮೈಸೂರು: ಕೆಲ ಅಧಿಕಾರಿಗಳು ಎಲ್ಲಾ ಪಕ್ಷದ ರಾಜಕಾರಣಿಗಳಿಗೆ ಸಹಕರಿಸುತ್ತಿದ್ದಾರೆ. ಇಂತಹ ಅಧಿಕಾರಿಗಳನ್ನು ಪಟ್ಟಿಮಾಡಿ ಬ್ಲಾಕ್ ಲಿಸ್ಟ್ ಗೆ ಸೇರಿಸಿ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.ಮೈಸೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇವತ್ತು ನಡೆದ ಕೆ.ಡಿ.ಪಿ ಸಭೆಯಲ್ಲಿ ಸಚಿವ ಸೋಮಣ್ಣರಿಗೆ ಸಂಸದ ಪ್ರತಾಪ್ ಸಿಂಹ ಈ ಮನವಿ ಮಾಡಿದರು. ಆರೇಳು ವರ್ಷದಿಂದ ಅಧಿಕಾರಿಗಳು ಇಲ್ಲೆ ಬೇರು ಬಿಟ್ಟಿದ್ದಾರೆ. ಇದರಿಂದ ಸರ್ಕಾರಿ ಕೆಲಸಗಳು ಸರಿಯಾಗಿ ಜಾರಿ ಆಗುತ್ತಿಲ್ಲ. ಈ ಜಿಲ್ಲೆಯವರೆ ಸಿಎಂ ಆಗಿದ್ದರು ಎಸ್‍ಎಸ್‍ಎಲ್‍ಸಿ ಯಲ್ಲಿ ಜಿಲ್ಲೆ ಪ್ರಥಮ ಸ್ಥಾನ ಗಳಿಸಲು ಸಾಧ್ಯವಾಗಿಲ್ಲ. ಜಿಲ್ಲೆಗೆ ದಕ್ಷ ಅಧಿಕಾರಿಗಳು ನೇಮಿಸಿ ಎಂದರು.ಇದೇ ವೇಳೆ ಪ್ರತಾಪ್ ಸಿಂಹ ಜಿಪಂ ಅನುದಾನವನ್ನು ಹೆಚ್ಚು ಮಾಡಿ ಎಂದು ಸಚಿವರಲ್ಲಿ ಮನವಿ ಮಾಡಿದರು. ಒಂದು ವರ್ಷದಲ್ಲಿ ಜಿಲ್ಲಾ ಪಂಚಾಯತ್ ಚುನಾವಣೆ ಬರುತ್ತಿದೆ. ಕೆಲಸ ಮಾಡದೆ ಜಿ.ಪಂ ಚುನಾವಣೆಗೆ ಜನರ ಮುಂದೆ ಹೇಗೆ ಹೋಗೋಕೆ ಆಗುತ್ತದೆ? ಹಿಂದೆ ಪ್ರತಿ ಸದಸ್ಯರಿಗೆ 60 ಲಕ್ಷ ಅನುದಾನ ಸಿಕ್ತಿತ್ತು. ಆದರೆ ಈಗ ಅನುದಾನ ಕಡಿತವಾಗಿದೆ. ಸಿಎಂಗೆ ಈ ವಿಚಾರದ ಬಗ್ಗೆ ಗಮನಕ್ಕೆ ತನ್ನಿ ಎಂದು ಮನವಿ ಮಾಡಿದರು.Sign in to your account
Username or Email Address


Password

 Remember Me


