ಮಂಡ್ಯ: ಹೊಸ ವರ್ಷದ ಅಂಗವಾಗಿ ಮಂಡ್ಯಲ್ಲಿ ಮೈಸೂರ್ ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟವನ್ನು ಏರ್ಪಡಿಸಲಾಗಿದೆ. ಮಂಡ್ಯದ ಜಿಲ್ಲಾ ಪಂಚಾಯತಿಯ ಹಿಂದಿ ಭವನದಲ್ಲಿ ಮಾರಾಟ ಮೇಳ ಏರ್ಪಡಿಸಲಾಗಿದೆ.ಹೊಸ ವರ್ಷದ ಅಂಗವಾಗಿ ಮಹಿಳೆಯರಿಗೆ ರಿಯಾಯಿತಿ ದರದಲ್ಲಿ ಮೈಸೂರ್ ಸಿಲ್ಕ್ ಸೀರೆಗಳನ್ನು ನೀಡುವ ಉದ್ದೇಶದಿಂದ ಕೆಎಸ್‍ಐಸಿ ಹಾಗೂ ಮೈಸೂರ್ ಸಿಲ್ಕ್ ವತಿಯಿಂದ ಇಂದಿನಿಂದ ನಾಲ್ಕು ದಿನಗಳ ಕಾಲ ಈ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ 4 ಸಾವಿರದಿಂದ ಒಂದುವರೆ ಲಕ್ಷದವರೆಗಿನ ಬೆಲೆಯ ಮೈಸೂರ್ ಸಿಲ್ಕ್ ಸೀರೆಗಳು ಲಭ್ಯವಿದ್ದು. ಪ್ರತಿ ಸೀರೆಗೂ ಶೇಕಡ 25 ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಕೇವಲ ಮೈಸೂರ್ ಸಿಲ್ಕ್ ಅಲ್ಲದೇ ಕ್ರೇಪ್ ಡಿ ಚೈನ್, ಜಾರ್ಜೆಟ್, ಸಾದಾ ಮುದ್ರಿತ ಸೀರೆಗಳು ಹಾಗೂ ಸಿಲ್ಕ್ ಶರ್ಟ್‍ಗಳು ಪ್ರದರ್ಶನ ಮತ್ತು ಮಾರಾಟದಲ್ಲಿ ಇವೆ. ಇಂದಿನಿಂದ ಆರಂಭವಾಗಿರುವ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ಉದ್ಘಾಟನೆ ಮಾಡಿದ್ದಾರೆ.Sign in to your account
Username or Email Address


Password

 Remember Me


