ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಸಂಜನಾ ಮತ್ತು ಬಾಲಿವುಡ್ ನಿರ್ಮಾಪಕಿ ವಂದನಾ ಗಲಾಟೆ ಪ್ರಕರಣಕ್ಕೆ ಈಗ ಟ್ವಿಸ್ಟ್ ಸಿಕ್ಕಿದೆ. ಇದೀಗ ವಂದನಾ 4 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆಯನ್ನು ಸಂಜನಾ ವಿರುದ್ಧ ದಾಖಲು ಮಾಡಿದ್ದಾರೆ.ಸಂಜನಾ ನನ್ನ ಮೇಲೆ ಇಲ್ಲ-ಸಲ್ಲದ ಆರೋಪ ಮಾಡಿದ್ದಾರೆ. ಆವತ್ತು ಅವರು ಮಾಡಿದ ಗಲಾಟೆಯಿಂದ ನನ್ನ ಕಣ್ಣಿನ ಮೇಲೆ ಗಾಯವಾಗಿದೆ. ಅದಕ್ಕೆ ಸಂಬಂಧಿಸಿದಂತೆ ನಾನು ದೂರು ನೀಡಿದ್ದೀನಿ. ದೂರಿನ ಬಗ್ಗೆ ಸುದ್ದಿ ಪ್ರಸಾರವಾದಾಗ ಸಂಜನಾ ನನ್ನ ಮೇಲೆ ಇಲ್ಲ-ಸಲ್ಲದ ಆರೋಪ ಮಾಡಿದ್ದಾರೆ. ನನ್ನ ವೈಯಕ್ತಿಕ ವಿಚಾರಗಳನ್ನೆಲ್ಲ ಸಾರ್ವಜನಿಕವಾಗಿ ಬಹಿರಂಗವಾಗಿ ಮಾತನಾಡಿದ್ದಾರೆ. ಇದರಿಂದ ನನಗೆ ಅವಮಾನವನ್ನೂ ಮಾಡಿದ್ದಾರೆ ಎಂದು ನಾಲ್ಕು ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಇದನ್ನೂ ಓದಿ:  ಅವಳು ಮಾಡಿದ್ದು ಮಾಡಲಿ, ನಾನು ಅವಳಷ್ಟು ಚೀಪ್ ಅಲ್ಲ: ವಂದನಾ ಜೈನ್ಅಷ್ಟೇ ಅಲ್ಲದೆ ಸಂಜನಾಗೆ ಲೀಗಲ್ ನೋಟಿಸ್ ಸಹ ನೀಡಿದ್ದಾರೆ. ಇದೆಲ್ಲದರ ಮಧ್ಯೆ ಸಂಜನಾ ಮಾಡಿದ ಆರೋಪಗಳಿಗೆ ವಂದನಾ ಉತ್ತರವನ್ನು ನೀಡಿದ್ದಾರೆ. 8 ನಿಮಿಷಗಳ ವಿಡಿಯೋ ಬಿಡುಗಡೆ ಮಾಡಿರುವ ವಂದನಾ, ಸಂಜನಾ ಆರೋಪಗಳಿಗೆಲ್ಲ ಪ್ರತ್ಯುತ್ತರವನ್ನು ನೀಡಿದ್ದಾರೆ. ಇದನ್ನೂ ಓದಿ: ವಂದನಾ ಪ್ರಚಾರಕ್ಕಾಗಿ ಗಲಾಟೆ ಮಾಡ್ತಿದ್ದಾಳೆ: ನಟಿ ಸಂಜನಾ ಆರೋಪಏನಿದು ಪ್ರಕರಣ?
ಬಾಲಿವುಡ್ ನಿರ್ಮಾಪಕಿ ವಂದನಾ ಜೈನ್ ಮತ್ತು ಸ್ಯಾಂಡಲ್‍ವುಡ್ ನಟಿ ಸಂಜನಾ ಇಬ್ಬರು ಸ್ನೇಹಿತರಾಗಿದ್ದರು. ಹೀಗೆ ಇಬ್ಬರೂ ಸ್ಟಾರ್ ಹೋಟೆಲಿನಲ್ಲಿ ಪಾರ್ಟಿ ಮಾಡುತ್ತಿದ್ದರು. ಒಂದೇ ಟೇಬಲ್‍ನಲ್ಲಿ ಕುಳಿತು ಕುಡಿಯುತ್ತಾ ಇದ್ದ ಇಬ್ಬರ ಮಧ್ಯೆ ಯಾವುದೋ ಒಂದು ವಿಚಾರಕ್ಕೆ ಸಂಬಂಧಿಸಿದಂತೆ ಮಾತಿಗೆ ಮಾತು ಬೆಳೆದಿದೆ. ಮಾತು ಅತಿರೇಕಕ್ಕೆ ಹೋಗಿದ್ದೇ ತಡ, ಇಬ್ಬರೂ ಪರಸ್ಪರ ಕೆಟ್ಟ ಮಾತುಗಳಿಂದ ಬೈದುಕೊಂಡಿದ್ದಾರೆ.ಈ ವೇಳೆ ಸಿಟ್ಟಿಗೆದ್ದ ಸಂಜನಾ ಅವರು ವಂದನಾರಿಗೆ ಹೊಡೆಯಲು ಮುಂದಾಗಿದ್ದು, ತನ್ನ ಕೈಯಲ್ಲಿದ್ದ ವಿಸ್ಕಿ ಗ್ಲಾಸನ್ನು ವಂದನಾ ಮೇಲೆ ಬಿಸಾಕಿದ್ದಾರೆ. ನಟಿ ಬಿಸಾಡಿದ ವೇಗಕ್ಕೆ ಗ್ಲಾಸ್ ನಿರ್ಮಾಪಕಿಯ ಹಣೆಗೆ ಬಂದು ಬಡಿದಿದೆ. ಇದಾದ ಬಳಿಕ ನಿರ್ಮಾಪಕಿಯು ನಟಿಯ ಮೇಲೆ ಕ್ರಮ ಕೈಗೊಳ್ಳಿ ಎಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಬಳಿಕ ರಾಜಿ ಪಂಚಾಯ್ತಿ ಮಾಡಿಕೊಂಡು ಕೇಸನ್ನು ಹಿಂಪಡೆದುಕೊಂಡಿದ್ದಾರೆ.Sign in to your account
Username or Email Address


Password

 Remember Me


