ಕಲಬುರಗಿ: ಹಣ ಕೊಡುವಂತೆ ಪದೇ ಪದೇ ಪೀಡಿಸುತ್ತಿದ್ದ ಪತ್ನಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕಲಬುರಗಿ ತಾಲೂಕಿನ ಅವರಾದ ಗ್ರಾಮದ ಹೊರವಲಯದಲ್ಲಿ ನಡೆದಿದೆ.ಶರಣಮ್ಮ ಮೃತ ಮಹಿಳೆ. ಮೃತ ಶರಣಮ್ಮ ನಾಲ್ಕು ವರ್ಷಗಳ ಹಿಂದೆ ಅದೇ ಗ್ರಾಮದ ಶರಣಪ್ಪ ಎಂಬವನ ಜೊತೆ ಮದುವೆಯಾಗಿದ್ದಳು. ಮದುವೆ ನಂತರ ಶರಣಮ್ಮ ಗಂಡನ ಜೊತೆ ಜಗಳವಾಡಿ ಬೇರೆಯವನ ಜೊತೆ ಓಡಿ ಹೋಗಿದ್ದಳು.ಶರಣಮ್ಮ ಇತ್ತೀಚೆಗೆ ಗ್ರಾಮಕ್ಕೆ ಬಂದು ಪತಿ ಶರಣಪ್ಪನ ಬಳಿ ಹಣ ನೀಡುವಂತೆ ಪೀಡಿಸಿದ್ದಾಳೆ. ಪದೇ ಪದೇ ಹಣ ಕೊಡುವಂತೆ ಒತ್ತಾಯಿಸುತ್ತಿದ್ದಳು. ಇದರಿಂದ ಬೇಸತ್ತ ಪತಿ ಹಣ ನೀಡುವುದಾಗಿ ಹೇಳಿ ಪತ್ನಿಯನ್ನು ಕರೆಸಿ, ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರ ಬಾಗಿ ಹತ್ಯೆ ಮಾಡಿದ್ದಾನೆ.ಕೊಲೆ ಮಾಡಿದ ನಂತರ ಆರೋಪಿ ಶರಣಪ್ಪ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಈ ಕುರಿತು ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


