ಬಾಗಲಕೋಟೆ: ಬೆಳ್ಳಂಬೆಳಗ್ಗೆಯೇ ಭೀಕರ ರಸ್ತೆ ಅಪಘಾತ ನಡೆದಿದ್ದು ಕೆಎಸ್‌ಆರ್‌ಟಿಸಿ ಬಸ್ ಮತ್ತು ಕಾರು ಮುಖಾಮುಖಿ ಡಿಕ್ಕಿಯಾಗಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಬಾಗಲಕೋಟೆಯ ಶಿರೋಳ ಗ್ರಾಮದ ಬಳಿ ನಡೆದಿದೆ.ಮೃತರನ್ನು ಸಿದ್ದರಾಯ ತೇಲಿ (36), ಬಾಲಪ್ಪ ಸೆಂಡಗಿ (34), ಹನಮಂತ ಗನಗಾರ (21) ಹಾಗೂ ರಿಯಾಜ್ ಜಾಲಗೇರಿ (25) ಎಂದು ಗುರುತಿಸಲಾಗಿದೆ. ಮೃತ ನಾಲ್ವರು ಜಮಖಂಡಿಯ ಗೋಟೆ ಮತ್ತು ಖಾಜಿ ಬೀಳಗಿ ಗ್ರಾಮದವರು ಎಂದು ತಿಳಿದು ಬಂದಿದೆ.ಕೆಎಸ್‌ಆರ್‌ಟಿಸಿ ಬಸ್ ಬೆಳಗಾವಿಯಿಂದ ಕಲಬುರಗಿಗೆ ಹೊರಟಿತ್ತು. ಇತ್ತ ಧಾರವಾಡಕ್ಕೆ ಕಾರಿನಲ್ಲಿ ನಾಲ್ವರು ಹೋಗುತ್ತಿದ್ದರು. ಆದರೆ ಶಿರೋಳ ಗ್ರಾಮದ ಬಳಿ ಕೆಎಸ್‌ಆರ್‌ಟಿಸಿ ಬಸ್ ಟ್ರ್ಯಾಕ್ಟರ್ ಅನ್ನು ಓವರ್ ಟೇಕ್ ಮಾಡಲು ಹೋಗಿ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ  ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಮಾಹಿತಿ ತಿಳಿದು ಮುಧೋಳ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಸದ್ಯಕ್ಕೆ ಮೃತರ ಶವಗಳನ್ನ ಮುಧೋಳ ಶವಗಾರಕ್ಕೆ ರವಾನಿಸಲಾಗಿದೆ.Sign in to your account
Username or Email Address


Password

 Remember Me


