ಬೆಂಗಳೂರು: ‘ಬಿಗ್‍ಬಾಸ್’ ವಿನ್ನರ್ ಚಂದನ್ ಶೆಟ್ಟಿ ತಮ್ಮ ಭಾವಿ ಪತ್ನಿ ನಿವೇದಿತಾ ಗೌಡಗೆ ಕೆನಡಾದಿಂದಲೇ ಸರ್ಪ್ರೈಸ್ ನೀಡಿದ್ದಾರೆ.ಹೌದು. ಈ ಬಾರಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಒಟ್ಟಿಗೆ ಹೊಸ ವರ್ಷವನ್ನು ಆಚರಣೆ ಮಾಡಿಲ್ಲ. ಯಾಕೆಂದರೆ ಚಂದನ್ ಕಾರ್ಯಕ್ರಮವೊಂದಕ್ಕೆ ಕೆನಡಾಗೆ ಹೋಗಿದ್ದಾರೆ. ಹೀಗಾಗಿ ಅಲ್ಲಿಂದಲೇ ನಿವೇದಿತಾಗೆ  ಒಂದು ವಿಡಿಯೋ ಮಾಡಿ ಸರ್ಪ್ರೈಸ್ ನೀಡಿದ್ದಾರೆ. ಇದನ್ನೂ ಓದಿ: ಮದುವೆ ತಯಾರಿಯಲ್ಲಿ ಚಂದನ್- ನಿವೇದಿತಾಚಂದನ್ ಕೆನಡಾದಲ್ಲಿ ಸ್ನೋ ಏಂಜಲ್ ತಯಾರಿಸಿ, ಆ ವಿಡಿಯೋನ ನಿವೇದಿತಾ ಗೌಡಗೆ ಕಳುಹಿಸುವ ಮೂಲಕ ಸರ್ಪ್ರೈಸ್ ಕೊಟ್ಟಿದ್ದಾರೆ. ತನ್ನ ಭಾವಿ ಪತಿ ನೀಡಿರುವ ಸರ್ಪ್ರೈಸ್ ಅನ್ನು ನಿವೇದಿತಾ ಗೌಡ ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.ಜೊತೆಗೆ “ಇದು ತುಂಬಾ ಕ್ಯೂಟ್ ಆಗಿದೆ. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. 2020ರ ಹೊಸ ವರ್ಷದಂದು ನಿನ್ನನ್ನು ತುಂಬಾ ಮಿಸ್ ಮಾಡಿಕೊಂಡೆ. ಹೊಸ ವರ್ಷದ ಶುಭಾಶಯಗಳು” ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಎಲ್ಲರಿಗೂ ಹೊಸ ವರ್ಷದ ಶುಭಾಶಯವನ್ನು ಕೋರಿದ್ದಾರೆ.ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ‘ಬಿಗ್‍ಬಾಸ್’ ಮನೆಯೊಳಗೆ ಭೇಟಿಯಾಗಿದ್ದು, ಇಬ್ಬರು ಸ್ನೇಹಿತರಾಗಿದ್ದರು. ಇಬ್ಬರ ಸ್ನೇಹ ಪ್ರೀತಿಯಾಗಿ ಬದಲಾಗಿದ್ದು, ಚಂದನ್ ಶೆಟ್ಟಿ ಮೈಸೂರು ಯುವ ದಸರಾ ವೇದಿಕೆ ಮೇಲೆ ನಿವೇದಿತಾ ಗೌಡ ಕೈಬೆರಳಿಗೆ ಉಂಗುರ ತೊಡಿಸುವ ಮೂಲಕ ಎಲ್ಲರ ಮುಂದೆಯೇ ಪ್ರಪೋಸ್ ಮಾಡಿದ್ದರು. ಬಳಿಕ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ನಿಶ್ಚಿತಾರ್ಥ ಸಮಾರಂಭ ಕೂಡ ಅದ್ಧೂರಿಯಾಗಿ ನಡೆದಿದೆ. ಸದ್ಯದಲ್ಲೇ ಇಬ್ಬರು ಮದುವೆಯಾಗಲಿದ್ದಾರೆ.https://www.instagram.com/p/B6xk92HJd9E/






 Advertisement 




Sign in to your account
Username or Email Address


Password

 Remember Me


