ರಾಯಚೂರು: ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿದಂತೆ ಕಿಸಾನ್ ಸಮ್ಮಾನ್ ಯೋಜನೆ ಅಡಿ ರೈತರ ಖಾತೆಗೆ 2 ಸಾವಿರ ರೂಪಾಯಿ ಹಣ ಜಮಾ ಆಗಿದೆ. ರಾಯಚೂರಿನ ಬಹುತೇಕ ರೈತರ ಖಾತೆಗೆ ಹಣ ಜಮಾ ಆಗಿದ್ದು ರೈತರು ಖುಷಿ ವ್ಯಕ್ತಪಡಿಸಿದ್ದಾರೆ.ರೈತರ ಖಾತೆಗಳಿಗೆ ಗುರುವಾರ ಮಧ್ಯಾಹ್ನ 3:30ರ ನಂತರ ಸಂಜೆ 6 ಗಂಟೆವರೆಗೂ ಹಣ ಜಮಾ ಆಗಿದೆ. ಹಣ ಜಮಾ ಮಾಡುವುದರ ಜೊತೆಗೆ ರೈತರಿಗೆ ಹೊಸ ವರ್ಷದ ಶುಭಾಶಯಗಳನ್ನೂ ಪ್ರಧಾನಿ ಮೋದಿ ತಿಳಿಸಿದ್ದಾರೆ.ರಾಜ್ಯಕ್ಕೆ ಆಗಮಿಸಿದ್ದ ಮೋದಿ ಮಧ್ಯಾಹ್ನ ಎರಡು ಗಂಟೆಗೆ ಮಾಡಿದ ಭಾಷಣದಲ್ಲಿ ಹಣ ಜಮಾ ಮಾಡುವುದಾಗಿ ಹೇಳಿದ್ದರು. ಮಧ್ಯಾಹ್ನದಿಂದಲೇ ರೈತರ ಖಾತೆಗೆ ಹಣ ಜಮಾವಾಗುತ್ತಿದೆ. ಹೀಗಾಗಿ ಪ್ರಧಾನಿ ಮೋದಿ ಅವರಿಂದ ಹಣ ಜಮಾ ಮಾಡಿದ ಒಂದು ಮೆಸೇಜ್, ಮತ್ತೊಂದು ಹೊಸ ವರ್ಷದ ಶುಭಾಶಯದ ಮೆಸೇಜ್ ರೈತರ ಮೊಬೈಲ್‍ಗಳಿಗೆ ಬಂದಿವೆ. ಭರವಸೆ ನೀಡಿದಂತೆ ನಡೆದು ಹಣ ಹಾಕುವ ಮೂಲಕ ಪ್ರಧಾನಿ ಮೋದಿ ಹೊಸ ವರ್ಷದ ಶುಭಾಶಯ ಕೋರಿದ್ದಾರೆ ಅಂತ ರಾಯಚೂರಿನ ರೈತರು ಖುಷಿಯಾಗಿದ್ದಾರೆ.Sign in to your account
Username or Email Address


Password

 Remember Me


