ಕೊಪ್ಪಳ: ಪ್ರವಾಸಿತಾಣ ಹಾಗೂ ವಿದೇಶಿಗರ ನೆಚ್ಚಿನ ಕೇಂದ್ರವಾದ ಗಂಗಾವತಿ ತಾಲೂಕಿನ ವಿರುಪಾಪುರ ಗಡ್ಡೆಯಲ್ಲಿ ಗಾಂಜಾ ಮಾರುತ್ತಿದ್ದ ನಾಲ್ವರು ಟೆಕ್ಕಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಹೈದರಾಬಾದ್ ಮೂಲದ ಶ್ರೀಕಾಂತ್ ಶಾಂಬಶಿವರಾವ್, ಚೈತನ್ಯ ಪ್ರಸಾದ್, ತರುಣ್ ಭಿಕ್ಷಾಪತಿ ಹಾಗೂ ಮಹರ್ಷಿ ಲಿಂಗಾರೆಡ್ಡಿ ಬಂಧಿತ ಆರೋಪಿಗಳು. ಹೊಸ ವರ್ಷ ಆಚಾರಣೆಯ ನೆಪದಲ್ಲಿ ಈ ನಾಲ್ವರು ವಿರುಪಾಪುರ ಗಡ್ಡೆಗೆ ಬಂದಿದ್ದರು. ಜೊತೆಗೆ ಮಾದಕ ವಸ್ತುಗಳನ್ನು ತಂದು ಇತರರಿಗೆ ನೀಡಲು ಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಖಚಿತ ಮಾಹಿತಿ ಮೆರೆಗೆ ದಾಳಿ ವಿರುಪಾಪುರ ಗಡ್ಡೆಯ ಆರ್.ಕೆ. ರೆಸಿಡೆನ್ಷಿಯಲ್ ಮೇಲೆ ದಾಳಿ ನಡೆಸಿದ ಪೊಲೀಸರು ನಾಲ್ವರನ್ನೂ ಬಂಧಿಸಿದ್ದಾರೆ. ಈ ಸಂಬಂಧ ಗಂಗಾವತಿ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ.Sign in to your account
Username or Email Address


Password

 Remember Me


