ಬೆಂಗಳೂರು: ಹೊಸ ವರ್ಷದ ಆಚರಣೆ ಮುಗಿದ ಮೇಲೂ ಪಾರ್ಟಿ ಮಾಡುತ್ತಿದ್ದರೆ ಹೀಗೆ ಆಗೋದು ಅನ್ಸುತ್ತೆ. ನ್ಯೂ ಇಯರ್ ಸೆಲೆಬ್ರೇಷನ್ ಅಲ್ಲಿ ಕುಡಿಯುತ್ತಾ ಕುಳಿತ್ತಿದ್ದ ಇಬ್ಬರು ಬಡಿದಾಡಿಕೊಂಡು ಒಬ್ಬ ಪ್ರಾಣ ಬಿಟ್ಟಿರೋ ಘಟನೆ ಬೆಂಗಳೂರಿನ ಪೀಣ್ಯದಲ್ಲಿ ನಡೆದಿದೆ.ತಿಪ್ಪೇಸ್ವಾಮಿ ಎಂಬಾತನೇ ಪ್ರಾಣ ಬಿಟ್ಟಿರೋ ದುರ್ದೈವಿ. ತಿಪ್ಪೇಸ್ವಾಮಿ ಮತ್ತು ಆತನ ಸ್ನೇಹಿತನಾದ ಸಂಜಯ್ ಇಬ್ಬರು ಪೀಣ್ಯದ ಪ್ಯಾಕ್ಟರಿ ಒಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಮಂಗಳವಾರವೂ ಪಾರ್ಟಿ ಮಾಡಿದ್ದ ಇಬ್ಬರು ಬುಧವಾರ ರಾತ್ರಿ ಕೂಡ ಪಾರ್ಟಿ ಮಾಡುತ್ತಾ ಕುಳಿತ್ತಿದ್ದಾರೆ.ಪಾರ್ಟಿ ಮಾಡುತ್ತಾ ಇದ್ದವರಲ್ಲಿ ಯಾವುದೋ ವಿಚಾರಕ್ಕೆ ಗಲಾಟೆಯಾಗಿದೆ. ಕಂಠ ಪೂರ್ತಿ ಕುಡಿದಿದ್ದರಿಂದ ಇಬ್ಬರು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿಬಿಟ್ಟಿದ್ದಾರೆ. ಮಾತಿನ ಜಗಳ ಜಾಸ್ತಿ ಆಗಿ ಸಂಜಯ್ ತಿಪ್ಪೇಸ್ವಾಮಿಗೆ ಕಪಾಳಕ್ಕೆ ಎರಡು ಬಾರಿಸಿದ್ದಾನೆ. ಮೊದಲೇ ಕುಡಿದ ನಶೆಯಲ್ಲಿ ಇದ್ದ ತಿಪ್ಪೇಸ್ವಾಮಿ ಏಟಿನ ರಭಸಕ್ಕೆ ನೆಲಕ್ಕೆ ಬಿದ್ದು ಸಾವನ್ನಪ್ಪಿದ್ದಾನೆ. ಇಬ್ಬರ ಕುಡುಕರ ಗಲಾಟೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಈ ಸಂಬಂಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದ್ದಾರೆ.Sign in to your account
Username or Email Address


Password

 Remember Me


