ಮೈಸೂರು: ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಅತಿಯಾಗಿ ಮದ್ಯ ಸೇವಿಸಿ ಮೈಸೂರಿನಲ್ಲಿ ಕಾನೂನು ವಿಧ್ಯಾರ್ಥಿಯೋರ್ವ ಸಾವನ್ನಪ್ಪಿದ್ದಾನೆ.ಮೈಸೂರಿನ ಎರಡನೇ ಈದ್ಗಾ ನಿವಾಸಿ ಕಾರ್ತಿಕ್(22) ಮೃತ ದುರ್ದೈವಿ. ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಕಾರ್ತಿಕ್ ಅಂತಿಮ ವರ್ಷದ ಕಾನೂನು ಪದವಿ ವಿದ್ಯಾರ್ಥಿಯಾಗಿದ್ದನು. ಹೊಸ ವರ್ಷಾಚರಣೆ ಹಿನ್ನಲೆ ಮೂವರು ಸ್ನೇಹಿತರ ಜೊತೆ ಕಾರ್ತಿಕ್ ಪಾರ್ಟಿ ಮಾಡಿದ್ದನು. ಈ ವೇಳೆ ಪಾರ್ಟಿ ಜೋಶ್‍ನಲ್ಲಿ ಗೆಳೆಯರೊಂದಿಗೆ ಸೇರಿ ಮಿತಿ ಮೀರಿ ಮದ್ಯ ಸೇವಿಸಿದ್ದಾನೆ.ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಮಿತಿಮೀರಿ ಮದ್ಯ ಸೇವಿಸಿದ ಪರಿಣಾಮ ಕಾರ್ತಿಕ್ ತೀವ್ರ ಅಸ್ವಸ್ಥಗೊಂಡಿದ್ದು, ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ರಾತ್ರಿ ಆಸ್ಪತ್ರೆಯಲ್ಲಿಯೇ ಕಾರ್ತಿಕ್ ಸಾವನ್ನಪ್ಪಿದ್ದಾನೆ. ಈ ಸಂಬಂಧ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


