ಬೆಂಗಳೂರು: ಎರಡು ದಿನಗಳ ಭೇಟಿಗಾಗಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಹೋಗುವ ಮತ್ತು ಬರುವ ರಸ್ತೆಗಳಲ್ಲಿ ಕೆಲ ಕಾಲ ಸಂಚಾರ ನಿರ್ಭಂದವಿರುತ್ತದೆ. ಈ ಹಿನ್ನೆಲೆಯಲ್ಲಿ ವಾಹನ ಸವಾರರು ಬೇರೆ ರೂಟ್‍ಗಳಲ್ಲಿ ಓಡಾಡಿದರೆ ಟ್ರಾಫಿಕ್ ಕಿರಿಕಿರಿ ತಪ್ಪಿಸಿಕೊಳ್ಳಬಹುದು.ಬೆಂಗಳೂರಿನಲ್ಲಿ ಎರಡು ದಿನ ಪ್ರಧಾನಿ:
* ಗುರುವಾರ ಮಧ್ಯಾಹ್ನ 1:20ಕ್ಕೆ ಯಲಹಂಕ ಏರ್‌ಫೋರ್ಸ್‌ ಸ್ಟೇಷನ್‍ಗೆ ಆಗಮನ
* ಮಧ್ಯಾಹ್ನ 1:25ಕ್ಕೆ ಯಲಹಂಕ ಏರ್‌ಫೋರ್ಸ್‌ ಸ್ಟೇಷನ್‍ನಿಂದ ಮಿಗ್-17 ಹೆಲಿಕ್ಯಾಪ್ಟರ್‌ನಲ್ಲಿ ತುಮಕೂರಿನತ್ತ ಪಯಣ
* ಮಧ್ಯಾಹ್ನ 2 ಗಂಟೆಗೆ ತುಮಕೂರು ವಿವಿ ಹೆಲಿಪ್ಯಾಡ್‍ನಲ್ಲಿ ಲ್ಯಾಂಡಿಂಗ್
* ಮಧ್ಯಾಹ್ನ 2:15ಕ್ಕೆ ಸಿದ್ದಗಂಗಾ ಮಠಕ್ಕೆ ಭೇಟಿ (3:20ಕ್ಕೆ ಸಿದ್ದಗಂಗಾ ಮಠದಿಂದ ನಿರ್ಗಮನ)
* ಮಧ್ಯಾಹ್ನ 3:30ಕ್ಕೆ ತುಮಕೂರಿನ ಸರ್ಕಾರಿ ಜೂನಿಯರ್ ಕಾಲೇಜು ಮೈದಾನಕ್ಕೆ ಎಂಟ್ರಿ
* ಕಿಸಾನ್ ಸಮ್ಮಾನ್‍ನ 4ನೇ ಕಂತಿನಲ್ಲಿ 6 ಕೋಟಿ ರೈತ ಕುಟುಂಬಗಳಿಗೆ 12 ಸಾವಿರ ಕೋಟಿ ನೇರ ಹಣ ವರ್ಗಾವಣೆ ಇದನ್ನೂ ಓದಿ: ರಾಜ್ಯಕ್ಕೆ ಆಗಮಿಸ್ತಿರೋ ಪ್ರಧಾನಿ ಮೋದಿ ಊಟದ ಮೆನು* ಆಯ್ದ 28 ರೈತರಿಗೆ ಕೃಷಿ ಕರ್ಮಣ್ ಪ್ರಶಸ್ತಿ ವಿತರಣೆ (ಮೀನು ಸಾಕಾಣಿದಾರರ ಸೌಲಭ್ಯಗಳ ವಿತರಣೆ ಸಮಾರಂಭಕ್ಕೆ ಚಾಲನೆ)
(ಸಂಜೆ 5:05 ನಿರ್ಗಮನ, 5:10ಕ್ಕೆ ತುಮಕೂರು ವಿವಿ ಹೆಲಿಪ್ಯಾಡ್‍ಗೆ ಆಗಮಿಸಿ ಹೆಚ್‍ಎಎಲ್‍ಗೆ ಪಯಣ)
* ಸಂಜೆ 5:50ಕ್ಕೆ ಎಚ್‍ಎಎಲ್‍ನ ಡಿಆರ್‍ಡಿಇ ಯುವ ವಿಜ್ಞಾನಿಗಳ ಕಾರ್ಯಕ್ರಮದಲ್ಲಿ ಭಾಗಿ
* ರಾತ್ರಿ 7:05ಕ್ಕೆ ಡಿಆರ್‌ಡಿಓದಿಂದ ರಸ್ತೆ ಮೂಲಕ ನಿರ್ಗಮನ
* ರಾತ್ರಿ 7:20ಕ್ಕೆ ರಾಜಭವನಕ್ಕೆ ಆಗಮನ ಹಾಗೂ ವಾಸ್ತವ್ಯ (ಡಿಆರ್‌ಡಿಓದ ಸುರಂಜನ ದಾಸ್ ರಸ್ತೆ, ಹೆಚ್ ಎಎಲ್ ರಸ್ತೆ,ಎಂ.ಜಿ ರಸ್ತೆ, ರಾಜಭವನ ರಸ್ತೆ, ಸಂಚಾರ ನಿಷೇಧ)
* ಶುಕ್ರವಾರ ಬೆಳಗ್ಗೆ 9:40ಕ್ಕೆ ರಾಜಭವನದಿಂದ ರಸ್ತೆ ಮೂಲಕ ಹೆಬ್ಬಾಳದ ಜಿಕೆವಿಕೆಗೆ ಆಗಮನ (ಈ ವೇಳೆ ಬಳ್ಳಾರಿ ರಸ್ತೆಯಲ್ಲಿ ಸಂಚಾರ ನಿರ್ಬಂಧ)
* ಜಿಕೆವಿಕೆಯಲ್ಲಿ ಬೆಳಗ್ಗೆ 10:00ರಿಂದ 11:05 ವರೆಗೆ 107ನೇ ಇಂಡಿಯನ್ ಸೈನ್ಸ್ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಭಾಗಿ
* ಬೆಳಗ್ಗೆ 11:10ಕ್ಕೆ ರಸ್ತೆ ಮೂಲಕ ಎಚ್‍ಎಎಲ್‍ಗೆ ವಾಪಸ್
* ಬೆಳಗ್ಗೆ 11:30ಕ್ಕೆ ಹೆಚ್‍ಎಎಲ್‍ನಿಂದ ದೆಹಲಿಗೆ ಪ್ರಯಾಣ (ಬಳ್ಳಾರಿ ರಸ್ತೆ, ಹೆಬ್ಬಾಳ ಫ್ಲೈ ಓವರ್, ಮೇಕ್ರಿ ಸರ್ಕಲ್, ಟ್ರಿನಿಟಿ ಸರ್ಕಲ್, ಎಚ್‍ಎಎಲ್ ರಸ್ತೆ, ದೊಮ್ಮಲೂರು, ಹೆಚ್‍ಎಎಲ್ ಮಾರ್ಗದಲ್ಲಿ ನಿರ್ಬಂಧ. ಹೀಗಾಗಿ, ಬದಲಿ ಮಾರ್ಗ ಬಳಸಿ)Sign in to your account
Username or Email Address


Password

 Remember Me


