ವಿಜಯಪುರ: ಜಯಪುರದ ನಿಡಗುಂದಿ ಪಟ್ಟಣದ ಬಸ್ಸಿಗಾಗಿ ಕಾಯುತ್ತಿದ್ದ ಗರ್ಭಿಣಿ ನಿಲ್ದಾಣದಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ.ಜಿಲ್ಲೆಯ ಬಸವನಬಾಗೇವಾಡಿ ಮೂಲದ ಮಹಾದೇವಿ ಹೆರಿಗೆ ಚಿಕಿತ್ಸೆಗೆಂದು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ತೆರಳಲು ನಿಡಗುಂದಿಗೆ ಬಂದಿದ್ದರು. ಈ ವೇಳೆ ಬಸ್ಸಿಗಾಗಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಿಡಗುಂದಿ ಬಸ್ ನಿಲ್ದಾಣದಲ್ಲಿ ಕಾಯುತ್ತ ಕುಳಿತಿದ್ದರು. ಅಷ್ಟರಲ್ಲೆ ಮಹಾದೇವಿಯವರಿಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದೆ. ಆಗ ಸ್ಥಳೀಯರ ಸಹಾಯದಿಂದ ನಿಲ್ದಾಣದಲ್ಲೆ ಹೆರಿಗೆ ಮಾಡಿಸಲಾಗಿದೆ.ಬಸ್ ನಿಲ್ದಾಣದಲ್ಲೇ ಹೆಣ್ಣು ಮಗುವಿಗೆ ಮಹಾದೇವಿ ಜನ್ಮ ನೀಡಿದ್ದು, ನಂತರ ನಿಡಗುಂದಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಾಯಿ ಮಗುವನ್ನು ದಾಖಲಿಸಲಾಗಿದೆ. ಹೆರಿಗೆ ಬಳಿಕ ತಾಯಿ-ಮಗು ಇಬ್ಬರು ಆರೋಗ್ಯದಿಂದ ಇದ್ದು, ಮಹಾದೇವಿಯವರಿಗೆ ಇದು ಎರಡನೇ ಹೆರಿಗೆ ಆಗಿದೆ.Sign in to your account
Username or Email Address


Password

 Remember Me


