ಮಡಿಕೇರಿ: ಹಾಕಿ ಇಂಡಿಯಾ ವತಿಯಿಂದ ಜನವರಿ 5ರಿಂದ 21ರವರೆಗೆ ನಡೆಯಲಿರುವ ಸೀನಿಯರ್ ವುಮೆನ್ ನ್ಯಾಷನಲ್ ಕೋಚಿಂಗ್ ಕ್ಯಾಂಪ್‍ಗೆ ತರಬೇತುದಾರರಾಗಿ ಕೊಡಗಿನ ಅಂಕಿತಾ ಸುರೇಶ್ ಆಯ್ಕೆಯಾಗಿದ್ದಾರೆ.ಬೆಂಗಳೂರಿನ ಸಾಯಿ ಸೆಂಟರ್ ನಲ್ಲಿ ಕೋಚಿಂಗ್ ಕ್ಯಾಂಪ್ ನಡೆಯಲಿದೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಸುಂಟಿಕೊಪ್ಪ ಸಮೀಪದ ಕಂಬಿಬಾಣೆ ಗ್ರಾಮದ ಅಂಕಿತಾ ಸುರೇಶ್ ಅವರು ಆಯ್ಕೆಯಾಗಿದ್ದಾರೆ. ಪ್ರಸ್ತುತ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪೊನ್ನಂಪೇಟೆ ಕ್ರೀಡಾ ವಸತಿ ನಿಲಯದಲ್ಲಿ ಹಾಕಿ ತರಬೇತುದಾರರಾಗಿ ಅಂಕಿತಾ ಸುರೇಶ್ ಕಾರ್ಯ ನಿರ್ವಹಿಸುತ್ತಿದ್ದಾರೆ.ಅಂಕಿತಾ ಅವರು ಶಿಕ್ಷಣದ ಅವಧಿಯಲ್ಲಿ ಸೀನಿಯರ್ ನ್ಯಾಷನಲ್ 4, ಜೂನಿಯರ್ ನ್ಯಾಷನಲ್ 2, ಆಲ್ ಇಂಡಿಯಾ ಅಂತರ ವಿಶ್ವ ವಿದ್ಯಾಲಯ ಸೇರಿದಂತೆ ಹಲವು ರಾಜ್ಯಗಳಲ್ಲಿ ನಡೆದ ಹಾಕಿ ಪಂದ್ಯಾವಳಿಗಳಲ್ಲಿ ಪಾಲ್ಗೊಂಡು ಸಾಧನೆ ಮಾಡಿದ್ದಾರೆ. ಚೆನ್ನೈನ ಅಣ್ಣಾಮಲೈ ವಿಶ್ವ ವಿದ್ಯಾಲಯಲ್ಲಿ ಸ್ನಾತಕೋತ್ತರ ಪದವಿ ಪಡೆದು ಮಡಿಕೇರಿ ಸಾಯಿ ವಸತಿ ನಿಲಯದಲ್ಲಿ ತರಬೇತಿ ಪಡೆದಿದ್ದರು.ಚೆನ್ನೈ, ಆಂಧ್ರಪ್ರದೇಶ, ಶಿವಮೊಗ್ಗದಲ್ಲಿ ಹಾಕಿ ತರಬೇತುದಾರರಾಗಿ ಅಂಕಿತಾ ಅವರು ಕಾರ್ಯ ನಿರ್ವಹಿಸಿದ್ದಾರೆ. ಹಾಕಿ ಕರ್ನಾಟಕ ಸಬ್ ಜೂನಿಯರ್, ಜೂನಿಯರ್, ಸೀನಿಯರ್ ಮಹಿಳಾ ತಂಡಕ್ಕೆ ಕೋಚ್ ಆಗಿಯೂ ಪಾಲ್ಗೊಂಡಿದ್ದರು.Sign in to your account
Username or Email Address


Password

 Remember Me


