ವಿಜಯಪುರ: ಜಿಲ್ಲೆಯಲ್ಲಿ ಹೊಸ ವರ್ಷಾಚರಣೆಯನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ಜಿಲ್ಲೆಯ ನಿಡಗುಂದಿ ಪಟ್ಟಣದ ಶಾಲಾ ಮಕ್ಕಳು ಹೊಸ ವರ್ಷಾಚರಣೆಯನು ವಿಭಿನ್ನವಾಗಿ ಸ್ವಾಗತಿಸಿದ್ದಾರೆ.ನಿಡಗುಂದಿ ಪಟ್ಟಣದ ಬನಶಂಕರಿ ಪಬ್ಲಿಕ್ ಸ್ಕೂಲ್‍ನಲ್ಲಿ 2020 ಸುಸ್ವಾಗತ ಎಂಬ ಮಾದರಿಯಲ್ಲಿ ಶಾಲಾ ಮಕ್ಕಳು ಕುಳಿತು ಹೊಸ ವರ್ಷಕ್ಕೆ ಸ್ವಾಗತ ಕೋರಿದ್ದಾರೆ.ಶಾಲೆಯ ಒಟ್ಟು 280 ವಿದ್ಯಾರ್ಥಿಗಳು ಸೇರಿ ಈ ವಿನೂತನ ಮಾದರಿಯಲ್ಲಿ ನೃತ್ಯಪ್ರದರ್ಶನ ಮಾಡಿ ಹೊಸ ವರ್ಷಾಚರಣೆ ಮಾಡಿದರು. ಶಾಲಾ ಮಕ್ಕಳು 2ನೇ ದಿನಗಳಲ್ಲಿ ತರಬೇತಿ ಪಡೆದು ಪ್ರದರ್ಶನ ನೀಡಿದ್ದು ವಿಶೇಷವಾಗಿದೆ. ಇಂದು ಬೆಳಗ್ಗೆ ಶಾಲೆಯಲ್ಲಿ ವಿಶೇಷ ವಿನ್ಯಾಸ ರೂಪಿಸಿದ ಮಕ್ಕಳು ಶಾಲಾ ಆಡಳಿತ ಮಂಡಳಿಯ ಗಮನ ಸೆಳೆದರು. ಇನ್ನು ಮಕ್ಕಳ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಕ್ಕಳ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.Sign in to your account
Username or Email Address


Password

 Remember Me


