ಬೆಂಗಳೂರು: ಅಮ್ಮಂದಿರ ಪಾಲಿಗೆ ಹೊಸ ವರ್ಷ ಡಬಲ್ ಸಂಭ್ರಮ. ಏಕೆಂದರೆ ಹೊಸ ವರ್ಷಕ್ಕೆ ಒಟ್ಟು 22 ತಾಯಂದಿರು ಮಕ್ಕಳಿಗೆ ಜನ್ಮ ನೀಡಿದ್ದಾರೆ.2020ರ ಮಧ್ಯರಾತ್ರಿ 12 ಗಂಟೆಯಿಂದ ಇದುವರೆಗೆ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಒಟ್ಟು 22 ತಾಯಂದಿರು ಮಕ್ಕಳಿಗೆ ಜನ್ಮವಿತ್ತಿದ್ದಾರೆ ಎಂದು ಆಸ್ಪತ್ರೆಯ ಅಧೀಕ್ಷಕಿ ಡಾ. ಗೀತಾ ಶಿವಮೂರ್ತಿ ಮಾಹಿತಿ ನೀಡಿದ್ದಾರೆ.ಹೊಸ ವರ್ಷ ದಿನವೇ ಪುಟಾಣಿಗಳು ಅಮ್ಮನ ಬಿಸಿಯಪ್ಪುಗೆಯಲ್ಲಿ ಇದ್ರೆ, ತಾಯಂದಿರ ಮುಖದಲ್ಲಿ ಸಂತೋಷದ ಆನಂದ ಭಾಷ್ಪ. ಹೊಸ ವರ್ಷದ ಸಂಭ್ರಮದ ಜೊತೆಗೆ ಮನೆಗೆ ಕಂದಮ್ಮ ಬಂದ ಖುಷಿಯನ್ನು ತಾಯಂದಿರು ವ್ಯಕ್ತಪಡಿಸಿದರು.ವೈದ್ಯರು ಕೂಡ ಹೊಸ ವರ್ಷದಂದು ಹುಟ್ಟಿದ ಪುಟಾಣಿಗಳ ತಾಯಂದಿರಿಗೆ ಶುಭಾಶಯ ತಿಳಿಸಿ ಸಂಭ್ರಮಿಸಿದರು. ವಾಣಿ ವಿಲಾಸ ಆಸ್ಪತ್ರೆಯಲ್ಲಿ ಸ್ಪೆಷಲ್ ಡೇ ಯಂದು ಹುಟ್ಟಿದ ಮಕ್ಕಳನ್ನು ನೋಡಿ ಎಲ್ಲರೂ ಖುಷಿಪಟ್ಟರು.Sign in to your account
Username or Email Address


Password

 Remember Me


