ಚಾಮರಾಜನಗರ: ಹೊಸವರ್ಷ ಸಂಭ್ರಮಾಚರಣೆಯ ಬಂದೋಬಸ್ತ್ ಕರ್ತವ್ಯ ನಿರ್ವಹಿಸಿ ಹಿಂದಿರುಗುವಾಗ ಆಯತಪ್ಪಿ ಬೈಕನಿಂದ ಬಿದ್ದ ಪೊಲೀಸ್ ಪೇದೆ ಮೃತಪಟ್ಟಿರುವ ಘಟನೆ ಜಿಲ್ಲೆಯ ಕೊಳ್ಳೇಗಾಲ ಮುಖ್ಯರಸ್ತೆಯ ಹೊಸ ಅಣಗಳ್ಳಿ ಬಳಿ ನಡೆದಿದೆ.ಆರ್.ಎಸ್. ದೊಡ್ಡಿ ಗ್ರಾಮದ ನಿವಾಸಿ ಸಿದ್ದರಾಜು ಮೃತ ಪೊಲೀಸ್ ಪೇದೆ. ಇವರು ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೃತ ಸಿದ್ದರಾಜು ಅವರನ್ನು ಹೊಸ ವರ್ಷದ ಸಂಭ್ರಮಾಚರಣೆಯ ಬಿಗಿ ಬಂದೋಬಸ್ತ್ ಗಾಗಿ ನರೀಪುರ ಪಾಯಿಂಟ್‍ಗೆ ನಿಯೋಜಿಸಲಾಗಿತ್ತು.ಸಿದ್ದರಾಜು ರಾತ್ರಿ ಕರ್ತವ್ಯ ಮುಗಿಸಿ ಹಿಂದಿರುಗುವಾಗ ರಸ್ತೆ ಗುಂಡಿಯಲ್ಲಿ ಬೈಕ್ ನಿಯಂತ್ರಣ ತಪ್ಪಿದೆ. ಪರಿಣಾಮ ಪಕ್ಕದ ಚಾನಲ್‍ಗೆ ಬೈಕ್ ಸಮೇತ ಸಿದ್ದರಾಜು ಬಿದ್ದಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಕುರಿತು ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


