ಮಡಿಕೇರಿ: ತನ್ನನ್ನು ಅಣ್ಣ ಅಂತ ಕರೆಯಲಿಲ್ಲ ಎಂದು ಬೈಕ್ ಸವಾರನೊಬ್ಬ ದಾರಿಹೊಕನ ಮೇಲೆ ಕಿರಿಕ್ ಮಾಡಿ, ಹಿಗ್ಗಾಮುಗ್ಗ ಥಳಿಸಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನಲ್ಲಿ ವಾಲ್ನೂರು-ತ್ಯಾಗತ್ತೂರು ಬಳಿ ಮಂಗಳವಾರ ರಾತ್ರಿ ನಡೆದಿದೆ.ಬೈಕ್ ಸವಾರ ಮದನ್, ಪಾದಾಚಾರಿ ಸುದೀಶ್ ಮೇಲೆ ಹಲ್ಲೆ ಮಾಡಿದ್ದಾನೆ. ರಸ್ತೆ ಸುದೀಶ್ ಹೇಗುತ್ತಿದ್ದಾಗ ಹಿಂಬದಿಯಿಂದ ಬೈಕ್‍ನಲ್ಲಿ ಬಂದು ಮದನ್ ಹಾರ್ನ್ ಮಾಡಿದ್ದಾನೆ. ಅಲ್ಲದೆ ದಾರಿಯಲ್ಲಿ ತನ್ನ ಪಾಡಿಗೆ ನಡೆದುಕೊಂಡು ಹೋಗುತ್ತಿದ್ದ ಸುದೀಶ್ ಜೊತೆ ವಿನಾಕಾರಣ ಜಗಳ ತೆಗೆದಿದ್ದಾನೆ. ಈ ವೇಳೆ ಸುದೀಶ್ ಹಾಗೂ ಮದನ್ ಇಬ್ಬರ ನಡುವೆ ಜಗಳವಾಗಿದ್ದು, ನೀನು ನನ್ನನ್ನು ಅಣ್ಣ ಅಂತ ಕರೆಯಬೇಕು ಎಂದು ಮದನ್ ಸುದೀಶ್ ಮೇಲೆ ಕೂಗಾಡಿದ್ದಾನೆ. ಅದಕ್ಕೆ ಸುದೀಶ್ ಒಪ್ಪದಿದ್ದಾಗ ಮದನ್ ಆತನಿಗೆ ಕಾಲಿನಿಂದ ಒದ್ದು, ಹಲ್ಲೆ ಮಾಡಿದ್ದಾನೆ.ಹಲ್ಲೆಯಲ್ಲಿ ಸುದೀಶ್‍ಗೆ ಗಂಭೀರ ಗಾಯಗಳಾಗಿದ್ದು, ಆತ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


