ಬೆಂಗಳೂರು: ಮಂಗಳವಾರ ಹೊಸ ವರ್ಷವನ್ನ ರಾಜಧಾನಿಯ ಜನ ಅದ್ಧೂರಿಯಾಗಿ ಸ್ವಾಗತಿಸಿದರು. ಈ ನಡುವೆ ನಗರದ ಎಂಜಿ ರೋಡ್‍ನಲ್ಲಿ ನ್ಯೂ ಇಯರ್ ಜೋಶ್‍ನಲ್ಲಿ ಕುಡಿದ ಮತ್ತಿನಲ್ಲಿದ್ದ ಯುವಕನೊಬ್ಬ ಬಹುಮಡಿ ಕಟ್ಟಡವೇರಿ ಸೆಲ್ಫಿ ತೆಗೆದುಕೊಂಡು ಕೆಲಕಾಲ ಆತಂಕದ ವಾತವರಣ ಸೃಷ್ಟಿಸಿದ್ದನು.ಈ ಕುಡುಕನ ಅವಾಂತರ ಕಂಡ ಜನರು ಗಾಬರಿಗೊಂಡಿದ್ದರು. ಕೆಳಗಿಳಿಯುವಂತೆ ಜನ ಎಷ್ಟೇ ಕೂಗಾಡಿದರೂ ಕುಡಿತದ ನಶೆಯಲ್ಲಿದ್ದ ಅಸಾಮಿ ಮಾತ್ರ ಕ್ಯಾರೇ ಎಂದಿಲ್ಲ. ಈ ವೇಳೆ ಯುವಕ ಏರಿದ ಕಟ್ಟಡದ ಮುಂದೆ ಜನ ದೊಡ್ಡ ಮಟ್ಟದಲ್ಲಿ ಜಮಾಯಿಸಿದ್ದರು. ಕೆಳಗಿಳಿದು ಬನ್ನಿ ಎಂದು ಜೋರಾಗಿ ಜನರು ಕೂಗಾಡಲು ಪ್ರಾರಂಭಿಸಿದರು.ಜನ ಸೇರಿದ್ದನ್ನ ಗಮನಿಸಿ ಪೊಲೀಸರು ಕೂಡ ಸ್ಥಳಕ್ಕೆ ಬಂದರು. ಆದರೆ ಅಷ್ಟರೊಳಗೆ ಆ ಯುವಕ ತನ್ನ ಪಾಡಿಗೆ ತಾನು ಸೆಲ್ಫಿ ಕ್ಲಿಕ್ಕಿಸಿಕೊಂಡು ಅಲ್ಲಿಂದ ಕಾಲ್ಕಿತ್ತಿದ್ದನು.Sign in to your account
Username or Email Address


Password

 Remember Me


