ಮೈಸೂರು: ಜಿಲ್ಲೆಯ ಕಡಕೊಳ ಬಳಿ ಸ್ಕೂಟರ್ ಮೇಲೆ ಅನುಮಾನಾಸ್ಪದ ಸ್ಥಿತಿಯಲ್ಲಿ ಯುವಕನೋರ್ವನ ಶವ ಪತ್ತೆಯಾಗಿದೆ.ನಂಜನಗೂಡು ತಾಲೂಕಿನ ಅಡಕನಹಳ್ಳಿ ಗ್ರಾಮದ ಕೃಷ್ಣ(22) ಮೃತ ದುರ್ದೈವಿ. ಸ್ಕೂಟರ್ ಮೇಲೆ ಕೃಷ್ಣನ ಮೃತದೇಹ ಪತ್ತೆಯಾಗಿದೆ. ಮೃತದೇಹ ಸಿಕ್ಕಿರುವ ಸ್ಥಳದಿಂದ ಸುಮಾರು 1 ಕಿಲೋ ಮೀಟರ್ ಸ್ಕೂಟರ್ ಎಳೆದು ತಂದಿರುವ ಗುರುತು ಪತ್ತೆಯಾಗಿದೆ. ಅಲ್ಲದೆ ಕೃಷ್ಣನ ಮೈ ಮೇಲೆ ಗಾಯದ ಗುರುತುಗಳಿವೆ. ಹೀಗಾಗಿ ಯಾರೋ ಕೊಲೆ ಮಾಡಿ ಕಡಕೊಳ ಬಳಿ ತಂದು ಹಾಕಿರುವ ಶಂಕೆ ವ್ಯಕ್ತವಾಗಿದೆ.ಮಂಗಳವಾರ ರಾತ್ರಿ ಮನೆಯಿಂದ ಹೋಗಿದ್ದ ಕೃಷ್ಣ ವಾಪಸ್ ಬಂದಿರಲಿಲ್ಲ. ಆದರೆ ಇಂದು ಬೆಳಗ್ಗೆ ಕೃಷ್ಣ ಶವವಾಗಿ ಪತ್ತೆಯಾಗಿದ್ದಾನೆ. ಈ ಬಗ್ಗೆ ತಿಳಿಯುತ್ತಿದ್ದಂತೆಯೇ ನಂಜನಗೂಡು ಗ್ರಾಮಾಂತರ ಪೊಲೀಸರು ಹಾಗೂ ಮೈಸೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.Sign in to your account
Username or Email Address


Password

 Remember Me


