ಬೆಂಗಳೂರು: ನಗರದ ಚರ್ಚ್ ಸ್ಟ್ರೀಟ್ ರಸ್ತೆಯಲ್ಲಿ ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿ ಆತಂಕದ ವಾತಾವರಣ ಸೃಷ್ಟಿಯಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ.ಹೊಸ ವರ್ಷ ಆಚರಣೆಗೆ ಕುಟುಂಬ, ಜೋಡಿ ಸೇರಿದಂತೆ ಬಹುತೇಕ ಜನರು ಚರ್ಚ್ ಸ್ಟ್ರೀಟ್‍ಗೆ ಬಂದಿದ್ದರು. ಆದರೆ ಅನುಮಾನಸ್ಪದ ಬ್ಯಾಗ್ ಪತ್ತೆಯಾದ ಹಿನ್ನೆಲೆ ಆ ರಸ್ತೆಯನ್ನು ಪೊಲೀಸರು ಬಂದ್ ಮಾಡಿದ್ದರು. ಅಲ್ಲದೆ ಯಾರು ಕೂಡ ಈ ರಸ್ತೆಗೆ ಬರಬೇಡಿ ಎಂದು ಸೂಚನೆ ಕೊಟ್ಟರು. ಇದನ್ನೂ ಓದಿ: ಕುಡಿದ ಜೋಶ್‍ನಲ್ಲಿ ಟೆರಸ್ ಹತ್ತಿ ಸೆಲ್ಫಿ ಕ್ಲಿಕ್ಕಿಸಿಕೊಂಡ ಯುವಕ ಇದೇ ವೇಳೆ ಈ ರಸ್ತೆಗೆ ಬರುವವರನ್ನು ಪೊಲೀಸರು ವಾಪಸ್ಸು ಕಳುಹಿಸುತ್ತಿದ್ದಂತೆ ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿತ್ತು. ಜನ ಗಾಬರಿಯಿಂದ ಓಡಾಡಲು ಶುರು ಮಾಡಿದರು. ಅನುಮಾನಾಸ್ಪದ ಬ್ಯಾಗ್ ಅನ್ನು ಪೊಲೀಸರ ಭಯದಿಂದಲೇ ಪರಿಶೀಲಿಸಿದರು.ಪರಿಶೀಲಿಸಿದಾಗ ಪೊಲೀಸರಿಗೆ ಖಾಲಿ ಟಿಫನ್ ಬಾಕ್ಸ್ ಪತ್ತೆಯಾಗಿದೆ. ಯಾರೋ ಬಿಟ್ಟು ಹೋಗಿರುವ ಖಾಲಿ ಬಾಕ್ಸ್ ಬ್ಯಾಗ್‍ನಿಂದ ಕೆಲಕಾಲ ನಿರ್ಮಾಣವಾಗಿದ್ದ ಆತಂಕಕ್ಕೆ ತೆರೆ ಬಿತ್ತು. ಆಗ ಪೊಲೀಸರು ಹಾಗೂ ಜನ ನಿಟ್ಟುಸಿರು ಬಿಟ್ಟರು.Sign in to your account
Username or Email Address


Password

 Remember Me


