ರಾಯಚೂರು: ರಾಯಚೂರಿನಲ್ಲಿ ಹೊಸ ವರ್ಷದ ಹೊಸ್ತಿಲಲ್ಲೇ ಪ್ರತ್ಯೇಕ ಭೀಕರ ಅಪಘಾತ ನಡೆದಿದ್ದು, ಇಬ್ಬರು ಮೃತಪಟ್ಟಿದ್ದಾರೆ.ಜಿಲ್ಲೆಯ ಕಟ್ಲಾಟ್ಕೂರು ಕ್ರಾಸ್ ಬಳಿ ಎರಡು ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಓರ್ವ ಯುವಕ ಸಾವನ್ನಪ್ಪಿರುವ ಘಟನೆ ನಡೆದಿದೆ. ಶ್ರೀಕಾಂತ್ (24) ಮೃತ ದುರ್ದೈವಿ. ಘಟನೆಯಲ್ಲಿ ಮಲ್ಲೇಶ್, ಲಿಂಗಪ್ಪ ಮತ್ತು ರವಿ ಎಂಬವರಿಗೆ ಗಂಭೀರ ಗಾಯಗಳಾಗಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪ್ರತ್ಯೇಕ ಘಟನೆಯಲ್ಲಿ ಮತ್ತೊರ್ವ ಸಾವನ್ನಪ್ಪಿದ್ದು, ಡಿಸೆಂಬರ್ ಅಂತ್ಯ ಜಿಲ್ಲೆಯಲ್ಲಿ ಎರಡು ಬಲಿ ಪಡೆದಂತಾಗಿದೆ. ಮಾನ್ವಿ ಪಟ್ಟಣದ ಮಲ್ಲಿಕಾರ್ಜುನ ಚಿತ್ರಮಂದಿರ ಬಳಿ ಬೈಕ್‍ಗೆ ಲಾರಿ ಡಿಕ್ಕಿಹೊಡೆದು 45 ವರ್ಷದ ಅಮರೇಶ್ ರಾಜಲದಿನ್ನಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮೃತ ಅಮರೇಶ್ ಮಾನ್ವಿಯಿಂದ ಸ್ವಗ್ರಾಮ ರಾಜಲದಿನ್ನಿಗೆ ಹೋಗುವಾಗ ಅಪಘಾತ ನಡೆದಿದೆ. ಈ ಸಂಬಂಧ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


