ಬೆಂಗಳೂರು: ಒಂದುಕಡೆ 2020ರ ಹೊಸ ವರ್ಷವನ್ನು ತುಂಬಾ ಸಂತೋಷದಿಂದ ಜನರು ಬರಮಾಡಿಕೊಂಡಿದ್ದಾರೆ. ಮತ್ತೊಂದೆಡೆ ಹೊಸ ವರ್ಷದ ಸಂಭ್ರಮದಲ್ಲಿ ಜನರು ನೈತಿಕತೆಯನ್ನು ಮರೆತು ರಸ್ತೆಯಲ್ಲಿ ಅಸಭ್ಯವಾಗಿ ನಡೆದುಕೊಂಡಿದ್ದಾರೆ.ನಗರದ ಚರ್ಚ್ ಸ್ಟ್ರೀಟ್‍ನ ರಸ್ತೆಯಲ್ಲಿ ಮದ್ಯದ ಅಮಲಿನಲ್ಲಿ ಎಲ್ಲಿದ್ದೇವೆ ಅನ್ನೋದನ್ನೇ ಮರೆತ ಜೋಡಿಯೊಂದು ಅರೆಬೆತ್ತಲೆಯಾಗಿ ರೊಮ್ಯಾನ್ಸ್ ಮಾಡಿದ್ದಾರೆ. ಚರ್ಚ್ ಸ್ಟ್ರೀಟ್ ನಲ್ಲಿ ಸೆಕ್ಯೂರಿಟಿಗಾಗಿ ಪೊಲೀಸರನ್ನು ನಿಯೋಜನೆ ಮಾಡಿದ್ದರು. ಪೊಲೀಸರು ನಿಯೋಜನೆ ಮಾಡಿರುವ ರಸ್ತೆಯಲ್ಲಿ ಪ್ರೇಮಿಗಳು ಅರೆಬೆತ್ತಲೆ ಸ್ಥಿತಿಯಲ್ಲಿದ್ದರು. ಅಲ್ಲದೇ ಯುವತಿ- ಯುವಕ ರೊಮ್ಯಾನ್ಸ್ ಕೂಡ ಮಾಡಿದ್ದಾರೆ. ಹೊಸ ವರ್ಷ ಎಂಬ ಕಾರಣಕ್ಕೆ ಪೊಲೀಸರು ಪ್ರಶ್ನೆ ಮಾಡಲ್ಲ, ರೊಮ್ಯಾನ್ಸ್ ಮಾಡೋರನ್ನು ಕಳಿಸುವುದಿಲ್ಲ ಎಂದು ಈ ರೀತಿ ನಡೆದುಕೊಂಡಿದ್ದಾರೆ.ಹೊಸ ವರ್ಷದ ಪಾರ್ಟಿ ಮುಗಿಸಿ ಪ್ರೇಮಿಗಳು ಚರ್ಚ್ ಸ್ಟ್ರೀಟ್‍ನ ಪಬ್ ನಿಂದ ಹೊರ ಬಂದಿದ್ದಾರೆ. ನಂತರ ರಸ್ತೆ ಮಧ್ಯದಲ್ಲಿ ನಿಂತುಕೊಂಡು ಜನರ ಸಮ್ಮುಖದಲ್ಲಿಯೇ ಲಿಪ್‍ಲಾಕ್ ಮಾಡಿದ್ದಾರೆ. ಈ ಮೂಲಕ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದ್ದಾರೆ. ಇದರಿಂದ ಪೊಲೀಸರು ಕೊಡುವ ಸೆಕ್ಯೂರಿಟಿ ಇದೆನಾ ಎಂಬ ಪ್ರಶ್ನೆ ಮೂಡಿ ಬರುತ್ತಿದೆ.ಚರ್ಚ್ ಸ್ಟ್ರೀಟ್ ಎಂಪೇರ್ ಹೋಟೆಲ್ ಮುಂಭಾಗ ಪಾರ್ಟಿ ಮುಗಿಸಿ ಪ್ರಿಯಕರನ ಜೊತೆ ಯುವತಿ ವಾಪಸ್ ಹೋಗುತ್ತಿದ್ದಳು. ಈ ವೇಳೆ ನಡು ಬೀದಿಯಲ್ಲಿ ಯುವತಿಯ ಖಾಸಗಿ ಅಂಗವನ್ನ ಯುವಕ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಹಿಂಬದಿಯಿಂದ ಬಂದು ಖಾಸಗಿ ಅಂಗ ಮುಟ್ಟುವ ಯುವಕನಿಗೆ ಯುವತಿ ತಲೆಗೆ ಹೊಡೆದಿದ್ದಾಳೆ. ಬಳಿಕ ಏನು ತಿಳಿಯದಂತೆ ಯುವಕ ಪರಾರಿಯಾಗಿದ್ದಾನೆ.Sign in to your account
Username or Email Address


Password

 Remember Me


