ಮಾಸ್ಟರ್ ಫೀಸ್ ಸಿನಿಮಾ ಮೂಲಕ ಖ್ಯಾತಿ ಗಳಿಸಿದ ನಿರ್ದೇಶಕ ಮಂಜು ಮಾಂಡವ್ಯ. ಶ್ರೀ ಭರತ ಬಾಹುಬಲಿ ಚಿತ್ರದ ಮೂಲಕ ಡೈರೆಕ್ಷನ್ ಕ್ಯಾಪ್ ಜೊತೆ ನಟನಾಗಿ ಬೆಳ್ಳಿತೆರೆಯಲ್ಲಿ ಮಿಂಚುವುದಕ್ಕೆ ರೆಡಿಯಾಗಿದ್ದಾರೆ. ಮಂಜು ಮಾಂಡವ್ಯ, ಚಿಕ್ಕಣ್ಣ ಮುಖ್ಯ ಭೂಮಿಕೆಯ ಈ ಚಿತ್ರದ ಟಪ್ಪಾಂಗೋಚಿ ಸಾಂಗ್ ರಿಲೀಸ್ ಆಗಿದೆ. ಕ್ಯಾಚಿ ಲಿರಿಕ್ಸ್ ಇರೋ ಈ ಸಾಂಗ್ ಎಲ್ಲರನ್ನೂ ರಂಜಿಸುತ್ತಿದೆ. ಈ ಹಾಡಿಗೆ ಮಂಜು ಮಾಂಡವ್ಯ ಲಿರಿಕ್ಸ್ ಬರೆಯೋದರ ಜೊತೆ ಹಾಡು ಹಾಡಿ ಸ್ಟೆಪ್ಪು ಹಾಕಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಶೃತಿ ಪ್ರಕಾಶ್ ಟಪ್ಪಾಂಗೋಚಿ ಸಾಂಗ್‍ಗೆ ಮಸ್ತ್ ಸ್ಟೆಪ್ ಹಾಕಿದ್ದು ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ.ಕೆಜಿಎಫ್ ಖ್ಯಾತಿಯ ಕಲಾ ನಿರ್ದೇಶಕ ಶಿವಕುಮಾರ್ ಹಾಕಿರೋ ಸೆಟ್‍ನಲ್ಲಿ ಕಲರ್ ಫುಲ್ ಆಗಿ ಮೂಡಿಬಂದಿರೋ ಈ ಹಾಡಿಗೆ ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ. ಈಗಾಗಲೇ ಚಿತ್ರದ ಮೆಲೋಡಿ ಸಾಂಗ್ ರಿಲೀಸ್ ಆಗಿ ಎಲ್ಲರ ಗಮನ ಸೆಳೆದಿದೆ. ವರ್ಷಾಂತ್ಯಕ್ಕೆ ರಿಲೀಸ್ ಆಗಿರೋ ಈ ಹಾಡು ಇಯರ್ ಎಂಡ್ ಸೆಲೆಬ್ರೇಷನ್‍ಗೆ ಹೇಳಿ ಮಾಡಿಸಿದಂತಿದೆ.ಜನವರಿ ಹದಿನೇಳಕ್ಕೆ ಶ್ರೀ ಭರತ ಬಾಹುಬಲಿ ಚಿತ್ರ ರಿಲೀಸ್ ಮಾಡಲು ಚಿತ್ರತಂಡ ಸಿದ್ಧವಾಗಿದೆ. ನಿರ್ದೇಶನ, ನಟನೆ, ನಿರ್ಮಾಣ ಜವಾಬ್ದಾರಿಯನ್ನು ಹೊತ್ತಿರೋ ನಿರ್ದೇಶಕ ಮಂಜು ಮಾಂಡವ್ಯ ಈಗ ಹಾಡುಗಾರರಾಗಿಯೂ ಬಡ್ತಿ ಪಡೆದಿರೋದು ವಿಶೇಷ ಸಂಗತಿ.Sign in to your account
Username or Email Address


Password

 Remember Me


